Monday, November 25, 2024
Monday, November 25, 2024

ಗಂಗೊಳ್ಳಿಯಲ್ಲಿ ಮನಸೆಳೆದ ಮೃಡ

ಗಂಗೊಳ್ಳಿಯಲ್ಲಿ ಮನಸೆಳೆದ ಮೃಡ

Date:

ಉಡುಪಿ, ಡಿ.13: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸಿದ ‘ಮೃಡ’ – ಒಂದು ಸತ್ಯದ ಕಥೆ ನಾಟಕ ತನ್ನ ಭಿನ್ನವೆನಿಸುವ ಕಥಾವಸ್ತು ಮತ್ತು ವಿಶೇಷ ಪ್ರಸ್ತುತಿಯಿಂದ ಗಮನ ಸೆಳೆಯಿತು. ಮರಣ ಹೊಂದುವ ಮೊದಲು ಶಿವನನ್ನು ನೋಡಬೇಕು ಆ ಮೂಲಕ ಜನರ ಕಣ್ಣಲ್ಲಿ ಆರಾಧಿಸಲ್ಪಡಬೇಕು ಎನ್ನುವ ಬಯಕೆಯೊಂದಿಗೆ ಶಿವನನ್ನು ನೋಡ ಹೊರಟ ಚಾರುಕೀರ್ತಿ ಎನ್ನುವ ಧನಿಕ ಅಂತಿಮವಾಗಿ ತನ್ನ ತಪ್ಪುಗಳಿಗೆ ಅಹಂಕಾರಕ್ಕೆ ಬಲಿಯಾಗುವ ಕಥೆಯನ್ನು ಹೊಂದಿರುವ ಈ ನಾಟಕದಲ್ಲಿ ಕ್ಷಮಾ ಆಚಾರ್ಯ, ವೆಲಿಟಾ ಲೋಬೊ, ಸನ್ನಿಧಿ ಕರ್ಣಿಕ್, ಭೂಮಿಕಾ ಪೂಜಾರಿ, ದಾಕ್ಷಾಯಿಣಿ ಖಾರ್ವಿ, ಶ್ರೀಲಕ್ಷ್ಮಿ, ಖುಷಿ ಸೇರಿದಂತೆ ಒಟ್ಟು 36 ವಿದ್ಯಾರ್ಥಿಗಳು ಅಭಿನಯಿಸಿದ್ದರು. ಹಿಮ್ಮೇಳದಲ್ಲಿ ವಿದ್ಯಾರ್ಥಿಗಳಾದ ವೀರೇಶ್, ಸುಜನ್ ಮತ್ತು ಕಾರ್ತಿಕ್ ಸಹಕರಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!