Tuesday, November 26, 2024
Tuesday, November 26, 2024

ದೇಶ ವಿಭಜಿಸಲು ಯತ್ನಿಸುವವರಿಗೆ ಸ್ಪಷ್ಟ ಸಂದೇಶ: ಶಾಸಕ ವೇದವ್ಯಾಸ್ ಕಾಮತ್

ದೇಶ ವಿಭಜಿಸಲು ಯತ್ನಿಸುವವರಿಗೆ ಸ್ಪಷ್ಟ ಸಂದೇಶ: ಶಾಸಕ ವೇದವ್ಯಾಸ್ ಕಾಮತ್

Date:

ಬೆಳಗಾವಿ, ಡಿ.11: ಆರ್ಟಿಕಲ್ 370 ರದ್ದತಿಗೆ ಸಂಬಂಧಿಸಿದಂತೆ ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಈ ಮೂಲಕ ದೇಶವನ್ನು ವಿಭಜಿಸಲು ಯತ್ನಿಸುವವರಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಇಡೀ ಭಾರತ ಮತ್ತೆ ಒಂದುಗೂಡುತ್ತಿದೆ. ಹಲವು ದಶಕಗಳ ನಂತರ ಜಮ್ಮು ಕಾಶ್ಮೀರದ ಜನರಿಗೆ ಹೊಸ ಆಶಾಭಾವನೆಯ ಬಾಗಿಲುಗಳು ತೆರೆದುಕೊಳ್ಳುತ್ತಿವೆ ಎಂಬುದನ್ನು ತೀರ್ಪು ಹೊರಬಂದ ಕೂಡಲೇ ಜಮ್ಮು ಕಾಶ್ಮೀರ ಮೂಲನಿವಾಸಿಗಳ ಸಂಭ್ರಮಾಚರಣೆ ನೋಡಿದರೆ ತಿಳಿಯುತ್ತದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಜನರ ಅಭಿವೃದ್ಧಿಯ ಪರವಾದ ತೀರ್ಪಿಗೆ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಇಡೀ ದೇಶದ ಪರವಾಗಿ ಕೃತಜ್ಞತೆಗಳು ಎಂದರು.

ತೀರ್ಪುನ್ನು ಉಲ್ಲೇಖಿಸಿ, ‘ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಜನರ ಕನಸುಗಳನ್ನು ಈಡೇರಿಸುವ ನಮ್ಮ ಸರ್ಕಾರದ ಬದ್ಧತೆ ಅಚಲವಾಗಿದೆ. ಸುಪ್ರೀಂಕೋರ್ಟ್ ಪಂಚ ಪೀಠದ ಸರ್ವಾನುಮತದ ಈ ತೀರ್ಪು ಭಾರತದ ಭವಿಷ್ಯದ ಭರವಸೆಯ ದಾರಿದೀಪವಾಗಿದೆ. ಬಲಿಷ್ಠ ಮತ್ತು ಅಖಂಡ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ಸಾಕ್ಷಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ನಯಾ ಭಾರತ ಹಾಗೂ ನಯಾ ಕಾಶ್ಮೀರಕ್ಕೆ ಉದಾಹರಣೆಯಾಗಿದೆ ಎಂದು ಶಾಸಕರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!