ಕಟಪಾಡಿ, ಡಿ.11: ಪಾಜಕ ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗೆ ತುಳು ಚಲನಚಿತ್ರ ರಾಪಾಟ ಚಿತ್ರ ತಂಡ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಚಿತ್ರದಲ್ಲಿರುವ ವಿಷಯ ವಸ್ತುವಿನ ಬಗ್ಗೆ ವಿವರಿಸಿ, ಇಂದಿನ ಸಮಾಜದಲ್ಲಿ ಹಿರಿಯರ ಸ್ಥಿಗತಿಗಳ ಬಗ್ಗೆ ಚಿತ್ರದಲ್ಲಿ ವಿವರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಸಾಂಸಾರಿಕ ಚಿತ್ರ ಇದಾಗಿದ್ದು, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಪ್ರಯತ್ನ ಇಡೀ ಚಿತ್ರ ತಂಡ ಮಾಡಿದೆ. ಎಲ್ಲರೂ ಚಿತ್ರ ವೀಕ್ಷಿಸಿ ತುಳು ಚಲನಚಿತ್ರ ಸಂಸ್ಥೆಯಿಂದ ಸಾಮಾಜಿಕ ಕಳಕಳಿಯ ಚಿತ್ರಗಳು ಇನ್ನೂ ಹೆಚ್ಚು ನಿರ್ಮಾಣವಾಗುವಂತೆ ಪ್ರೇರೇಪಣೆ ನೀಡಬೇಕೆಂದು ವಿನಂತಿಸಿದರು.
ಆನಂದತೀರ್ಥ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಾದ 6ನೇ ತರಗತಿಯ ಸಾತ್ವಿಕ್, ಹಾಗೂ 3ನೇ ತರಗತಿಯ ಸಂಯಕ್ ಈ ಚಿತ್ರದಲ್ಲಿ ಬಾಲ ಕಲಾವಿದರಾಗಿ ಅಭಿನಯಿಸಿದ್ದು, ಅತ್ಯಂತ ಮನೋಜ್ಞಯವಾಗಿ ಅಭಿನಯಿಸಿದ್ದಾರೆ. ಪುಟಾಣಿಗಳು ಯಾವುದೇ ಭಯವಿಲ್ಲದೆ ತಮ್ಮ ಪಾತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ ಎಂದರು. ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್, ತುಳು, ಕನ್ನಡ ಚಲನಚಿತ್ರದ ಹೆಸರಾಂತ ನಟ ದೇವ್‌ದಾಸ್ ಕಾಪಿಕಾಡ್, ಚಿತ್ರದ ನಿರ್ಮಾಪಕ ಸಂತೋಷ್ ಸುವರ್ಣ, ಸುಚಿತ್ರಾ, ಆನಂದತೀರ್ಥ ಕಾಲೇಜಿನ ಪ್ರಾಂಶುಪಾಲ ವಿಜಯ್ ಪಿ. ರಾವ್, ವಿದ್ಯಾಲಯ ಪ್ರಾಂಶುಪಾಲೆ ಡಾ. ಗೀತಾ ಎಸ್. ಕೋಟ್ಯಾನ್, ಶ್ರೀ ವಿಶ್ವೇಶತೀರ್ಥ ಪದವಿ ಕಾಲೇಜಿನ ಸಂಯೋಜಕಿ ರಕ್ಷಿತಾ, ಸಂಸ್ಕೃತ ಶಿಕ್ಷಕ ವೀರೇಂದ್ರ ಹೆಗಡೆ, ಉಪನ್ಯಾಸಕರಾದ ಶ್ರೀದೇವಿ, ಮಾನಸಾ ಭಟ್, ಸುಕನ್ಯಾ, ದೈ.ಶಿ.ಶಿಕ್ಷಕರಾದ ಸಂತೋಷ್ ಕುಮಾರ್, ವಕ್ಷತ್ ಸಾಲಿಯಾನ್, ಹೇಮಂತ್, ಸಚಿನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.