ಉಡುಪಿ, ಡಿ.8: ಉಡುಪಿಯ ಶ್ರೀ ಪುತ್ತಿಗೆ ಮಠದಲ್ಲಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಸಮಕ್ಷಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಎಸ್.ಪಿ. ಅರುಣ್, ಹಾಗೂ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅವರು ಪರ್ಯಾಯ ಪೂರ್ವಸಿದ್ಧತೆಗೆ ಸರ್ಕಾರದಿಂದ ಕೈಗೊಳ್ಳುವ ಕರ್ತವ್ಯಗಳ ಬಗ್ಗೆ ಚರ್ಚಿಸಿದರು. ಶ್ರೀ ಶ್ರೀಗಳವರು ಪರ್ಯಾಯೋತ್ಸವಕ್ಕೆ ಬರುವ ಹೊರದೇಶದ ಗಣ್ಯರಿಗೆ, ಭಕ್ತಾದಿಗಳಿಗೆ ಸರ್ಕಾರದಿಂದ ಸೂಕ್ತ ರಕ್ಷಣೆ, ಸಕಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಶ್ರೀ ಕೃಷ್ಣನ ಸೇವೆ ಮಾಡಿ. ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಎಂದು ತಿಳಿಸಿ ಕೋಟಿ ಗೀತಾಲೇಖನ ದೀಕ್ಷೆ ನೀಡುವ ಮೂಲಕ ಅನುಗ್ರಹ ಮಂತ್ರಾಕ್ಷತೆ ನೀಡಿದರು.
ಸಮಿತಿಯ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್, ಮಠದ ದಿವಾನರಾದ ನಾಗರಾಜ ಆಚಾರ್ಯ, ಕೋಶಾಧಿಕಾರಿ ರಂಜನ್ ಕಲ್ಕೂರ, ಸಹ ಸಂಚಾಲಕರಾದ ರಮೇಶ್ ಭಟ್ ಕೆ., ಹರಿಕೃಷ್ಣ ಶಿವಾತ್ತಾಯ, ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.