ಉಡುಪಿ, ಡಿ.1: ಉಡುಪಿಯ ಸೈಂಟ್ ಸಿಸಿಲಿಸ್ ಕಾಲೇಜಿನ ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ರೋನಾನ್ ಲೂವಿಸ್, ಈಜು ವಿಭಾಗದಲ್ಲಿ ವಿಶೇಷವಾದ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಮಂಗಳೂರಿನ ಮಂಗಳ ಈಜುಕೊಳದಲ್ಲಿ 50 ಮೀಟರ್ ನೀರಿನ ಒಳಗೆ ಒಂದೇ ಉಸಿರಿನಲ್ಲಿ ಈಜಿ 54 ಸೆಕೆಂಡ್ ಒಳಗೆ ಈ ದೂರ ಕ್ರಮಿಸಿ ದಾಖಲೆ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಅವರು ಗೆನ್ನಿಸ್ ಬುಕ್ ಆಫ್ ರೆಕಾರ್ಡ ದಾಖಲೆ ಮಾಡುವಲ್ಲಿ ತಯಾರಿ ನಡೆಸುತ್ತಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ ಮತ್ತು ಮೆಡಲ್ ನ್ನು ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ ಪ್ರದಾನ ಮಾಡಿದರು ಖ್ಯಾತ ಈಜು ಪಟು ಗೋಪಾಲ್ ಖಾರ್ವಿ, ರೋನಾನ್ ಲೂವಿಸ್ ಅವರ ತಂದೆ ರೋಷನ್ ಲೂವಿಸ್ ಮತ್ತು ತಾಯಿ ಶೈಲಾ ಲೂವಿಸ್ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಈ ಬಗ್ಗೆ ಮಾಹಿತಿ ನೀಡಿದರು. ರೋನಾನ್ ರವರು ಈ ಸಾಧನೆಯನ್ನು ಈಜು ಕೋಚ್ ಚಂದ್ರಶೇಖರ ಶೆಟ್ಟಿ ಮತ್ತು ಗೋಪಾಲ್ ಖಾರ್ವಿ ಮಾರ್ಗದರ್ಶನದಲ್ಲಿ ತಯಾರಿ ನಡೆಸಿದ್ದರು.