ಉಡುಪಿ, ನ.20: ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳವರ ಚತುರ್ಥ ಪರ್ಯಾಯವು ವೈಭೋವೋಪೇತವಾಗಿ ನಡೆಸುವಂತೆ ಕೆನರಾ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಕೆ. ಸತ್ಯನಾರಾಯಣ ರಾಜು ರವರು ಪುತ್ತಿಗೆ ಪರ್ಯಾಯದ ಆರ್ಥಿಕ ಮನವಿಗೆ ಸ್ಪಂದಿಸಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎಚ್. ಎಸ್. ಬಲ್ಲಾಳರಿಗೆ ರೂ. 25,00,000 ದೇಣಿಗೆಯನ್ನು ಹಸ್ತಾಂತರಿಸಿದಲ್ಲದೆ ಪುತ್ತಿಗೆ ಪರ್ಯಾಯಕ್ಕೆ ಮುಂದೆಯೂ ತಮ್ಮ ಸಂಸ್ಥೆಯಿಂದ ಸರ್ವ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಶ್ರೀ ಮಠದ ದಿವಾನರಾದ ನಾಗರಾಜ್ ಆಚಾರ್ಯ, ಕೋಶಾಧಿಕಾರಿ ರಂಜನ್ ಕಲ್ಕೂರ, ಸಂಚಾಲಕರಾದ ಜಯಕರ ಶೆಟ್ಟಿ ಇಂದ್ರಾಳಿ, ರಮೇಶ್ ಭಟ್ ಕೆ., ಸಮಿತಿ ಸದಸ್ಯರುಗಳಾದ ರವೀಂದ್ರ ಆಚಾರ್ಯ, ಉಮೇಶ್ ಭಟ್, ಬ್ಯಾಂಕಿನ ಅಧಿಕಾರಿಗಳಾದ ಎಂ. ಜಿ .ಪಂಡಿತ್, ವಿನೋದ್ ವಿಷ್ಣು ಜೋಶಿ, ರಾಜೀವ್ ತುಕ್ರಾಲ್, ರವಿ ಪ್ರಸಾದ್ ಭಟ್ ಉಪಸ್ಥಿತರಿದ್ದರು.