ಕೋಟ, ನ.20: ಮಕ್ಕಳಲ್ಲೂ ವಿಶೇಷವಾದ ಪ್ರತಿಭೆಗಳು ಅಡಕವಾಗಿರುತ್ತದೆ, ಅಂತಹ ಪ್ರತಿಭೆಗಳು ಅನಾವರಣಗೊಂಡು ಮುಖ್ಯವಾಹಿನಿಗೆ ಬರುವಂತೆ ಮಾಡುವ ಕೆಲಸ ನಮ್ಮೆಲ್ಲರ ಜವಬ್ದಾರಿಯಾಗಿರುತ್ತದೆ, ಅವರಲ್ಲಿನ ಹೊಸ ಚಿಂತನೆ, ಅಭಿರುಚಿಗಳಿಗೆ ಧ್ವನಿಯಾಗುವುದರ ಮೂಲಕ ಅವರ ಸಾಧನೆಯ ಹೆಜ್ಜೆಗಳಿಗೆ ವೇದಿಕೆ ಕಲ್ಪಿಸಬೇಕು ಎಂದು ಯಡ್ತಾಡಿ ಯುವವಾಹಿನಿ ಘಟಕದ ಅಧ್ಯಕ್ಷ ರಮೇಶ್ ಪೂಜಾರಿ ಹೇಳಿದರು. ಅವರು ಯುವವಾಹಿನಿ (ರಿ)ಯಡ್ತಾಡಿ ಘಟಕದ ವತಿಯಿಂದ ಸಾಯ್ಬ್ರಕಟ್ಟೆಯ ದಾಳಾಡಿ ಮನೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕನ್ನಡ ಶಾಲೆಯ ಮಹತ್ವ ಸಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ದಿ ಪಡೆದಿರುವ ವಿಡಿಯೋದಲ್ಲಿ ಅಭಿನಯಿಸಿದ ಪ್ರಣೀತಾ, ಪುನೀತ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೃಜನ್ , ಸಾಗರ್ ಅವರನ್ನು ಸನ್ಮಾನಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ರಾಘವೇಂದ್ರ ಪೂಜಾರಿ ಬೈಕಾಡಿ, ರಾಜು ಪೂಜಾರಿ ಯಡ್ತಾಡಿ, ನರಸಿಂಹ ಪೂಜಾರಿ, ಯಡ್ತಾಡಿ ಘಟಕದ ಸಾಂಸ್ಕೃತಿಕ ಕಾರ್ಯದರ್ಶಿ ಅಮೃತ್ ಎಸ್., ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಜಿತ್ ಕುಮಾರ್ ವರದಿ ವಾಚಿಸಿದರು. ಪ್ರತಿಮಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು.