ಉಡುಪಿ, ನ.10: ಉಡುಪಿ ಜಿಲ್ಲೆಯ ಶಂಕರಪುರದಲ್ಲಿರುವ ಮಾನಸಿಕ ಅಸ್ವಸ್ಥರ ಅನಾಥಶ್ರಮದ ವಿಶ್ವಾಸದ ಮನೆಯಲ್ಲಿ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆ ಇದರ ನೇತೃತ್ವದಲ್ಲಿ ಸೌಹರ್ದಯುತ ದೀಪಾವಳಿ ಸಂಭ್ರಮ ಆಚರಣೆಯು ವಿಶೇಷವಾಗಿ ನಡೆಯಿತು. ಭಾವನಾತ್ಮಕವಾಗಿ ನಡೆದ ಕಾರ್ಯಕ್ರಮದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಸ್ಥೆಯ ಪದಾಧಿಕಾರಿಗಳು ಅನಾಥಶ್ರಮದ ಜನರ ಜೊತೆ ಬೆರೆತು ಸೌಹರ್ದಯುತವಾಗಿ ದೀಪಾವಳಿ ಸಂಭ್ರಮ ಆಚರಿಸಿದರು.
ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ನೇತೃತ್ವದಲ್ಲಿ ಸೌಹರ್ದಯುತ ದೀಪಾವಳಿ ಸಂಭ್ರಮದ ಅಂಗವಾಗಿ ೨೦೦ ಮಂದಿಗೆ ಬಟ್ಟೆ, ೧೦೦ಕೆಜಿ ಅಕ್ಕಿ, ೫೦ ತೆಂಗಿನಕಾಯಿ, ೫೦ ಪ್ಯಾಕೆಟ್ ಬಿಸ್ಕಿಟ್, ಬೆಲ್ಲ, ಸಕ್ಕರೆ, ತರಕಾರಿ, ಸಿಹಿತಿಂಡಿ ಮತ್ತು ದಿನಬಳಕೆ ಸಾಮಾಗ್ರಿಗಳನ್ನು ನೀಡಿ ಮಾತಾಡಿದವರು ವಿಶ್ವಾಸದ ಮನೆ ಅನಾಥಶ್ರಮ ಹೆಸರಿನಂತೆ ಅನಾಥರ ಬಾಳಿಗೆ ನಿರ್ಗತಿಕರಿಗೆ ವಿಶ್ವಾಸದ ಆಶ್ರಯದ ಬೆಳಕನ್ನು ಬೆಳಗುತ್ತಿರುವ ವಿಶ್ವಾಸದ ಮನೆಯ ಮುಖ್ಯಸ್ಥರಾದ ರೇ|ಫಾ|ಸುನಿಲ್ ಡಿ’ಸೋಜಾರವರ ನೇತೃತ್ವದಲ್ಲಿ ನೂರಾರು ಮಂದಿ ಅಸಹಾಯಕರ ಸೇವೆ ಮಾಡುತ್ತಿರುವ ಈ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿಶ್ವಾಸದ ಮನೆಯಲ್ಲಿರುವ ಎಲ್ಲರಿಗೂ ದೀಪಾವಳಿ ಸಂಭ್ರಮಾಚರಣೆಯ ಶುಭಾಶಯಗಳನ್ನು ಸಲ್ಲಿಸಿದರು.
ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ಸತೀಶ್ ಪೂಜಾರಿ ಅಬ್ಬನಡ್ಕ, ಬೋಳ ಉದಯ ಅಂಚನ್, ಉಪಾಧ್ಯಕ್ಷ ಬಾಲಕೃಷ್ಣ ಮಡಿವಾಳ, ಸದಸ್ಯರಾದ ಸುರೇಶ್ ಅಬ್ಬನಡ್ಕ, ಯೋಗೀಶ್ ಆಚಾರ್ಯ, ಅನ್ನಪೂರ್ಣ ಕಾಮತ್ ಹಾಗೂ ಶಂಕರಪುರದ ವಿಶ್ವಾಸದ ಮನೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.