ಬ್ರಹ್ಮಾವರ, ನ.3: ಬ್ಯೂಟೀಪಾರ್ಲರ್ ಅನ್ನುವ ವೃತ್ತಿಯು ಸೇವೆಯನ್ನು ನೀಡುವಂತಹದಾಗಿರುತ್ತದೆ. ಉತ್ತಮವಾದ ಸೇವೆ ನೀಡಿದಲ್ಲಿ ಹೆಚ್ಚಿನ ಸಂಪಾದನೆ ಮಾಡಬಹುದು. ಸ್ವಾವಲಂಬಿ ಬದುಕನ್ನು ಕಟ್ಟಿಕೊಡಲು ಇಂದು ಭದ್ರ ಬುನಾದಿಯನ್ನು ರುಡ್ ಸೆಟ್ ಸಂಸ್ಥೆ ಹಾಕಿಕೊಡುತ್ತಿದೆ. ಇದು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಬ್ಯಾಂಕಿನ ಮಹತ್ವದ ಕೆಲಸ ಎಂದು ಕುಂಜಿಬೆಟ್ಟು ಕೆನರಾ ಬ್ಯಾಂಕ್ ನ ಹಿರಿಯ ಪ್ರಬಂಧಕರಾದ ಜಯಂತ ಅಡಿಗ ಅಭಿಪ್ರಾಯಪಟ್ಟರು. ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆಯಲಿರುವ ಬ್ಯೂಟೀ ಪಾರ್ಲರ್ ನಿರ್ವಹಣೆ ತರಬೇತಿಯನ್ನು ಉದ್ಘಾಟಸಿ ಅವರು ಮಾತನಾಡಿದರು. ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸರಕಾರದ ಯೋಜನೆಯನ್ನು ಬಳಸಿಕೊಂಡು ಸಾಮಾಜಿಕ ವಿಮೆಗಳನ್ನು ಸಹ ಮಾಡಿಸಿಕೊಳ್ಳಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಶ ಎ.ಜಿ ಮಾತನಾಡಿ, ಬ್ಯೂಟೀಪಾರ್ಲರ್ ತರಬೇತಿಯಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಇರುತ್ತದೆ. ಇದು ವ್ತಕ್ತಿಯಲ್ಲಿ ಮತ್ತು ಜೀವನದಲ್ಲಿ ಹೆಚ್ಚಿನ ಉಪಯೋಗವಾಗುತ್ತದೆ ಎಂದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸಂತೋಷ ಶೆಟ್ಟಿ ವಂದಿಸಿದರು.