ಉಡುಪಿ, ಅ.31: ನವೆಂಬರ್ 8 ರಿಂದ ಮಂಗಳೂರು ಕೆಎಂಸಿ ಆಸ್ಪತ್ರೆಯ ಖ್ಯಾತ ನರರೋಗ ತಜ್ಞ ಡಾ. ರೋಹಿತ್ ಪೈ ಅವರು ಉಡುಪಿಯ ಡಾ. ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಅವರು ತಿಳಿಸಿದ್ದಾರೆ. ಈ ವ್ಯವಸ್ಥೆಯು ಉಡುಪಿಯ ಸಮುದಾಯಕ್ಕೆ ಡಾ. ರೋಹಿತ್ ಅವರ ತಜ್ಞ ನರವಿಜ್ಞಾನದ ಆರೈಕೆ ಸೇವೆ ಪಡೆಯಲು ಅನುವು ಮಾಡಿಕೊಡಲಿದೆ. ತಮ್ಮ ಪರಿಣತಿ ಮತ್ತು ಕಾಳಜಿಗಾಗಿ ಗುರುತಿಸಲ್ಪಟ್ಟಿರುವ ಡಾ. ರೋಹಿತ್ ಪೈ ಅವರು ತಿಂಗಳ ಪ್ರತಿ ಎರಡನೇ ಬುಧವಾರದಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಅಪಾಯಿಂಟ್‌ಮೆಂಟ್ ಆಧಾರದ ಮೇಲೆ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ. ವಿಶೇಷವಾಗಿ ಕೆಳಗಿನ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವವರು ಈ ಪ್ರಯೋಜನ ಪಡೆಯಬಹುದು;
ಅಪಸ್ಮಾರ, ಆಲ್ಝೈಮರ್ ಕಾಯಿಲೆ (ನಿಧಾನವಾಗಿ ನೆನೆಪಿನ ಶಕ್ತಿ ಕಡಿಮೆಯಾಗುವುದು), ಇತರ ಬುದ್ಧಿಮಾಂದ್ಯತೆಗಳು, ಪಾರ್ಶ್ವವಾಯು, ಮೈಗ್ರೇನ್ ಮತ್ತು ಇತರ ತಲೆನೋವು ಸೇರಿದಂತೆ ಸೆರೆಬ್ರೊವಾಸ್ಕುಲರ್ ಕಾಯಿಲೆಗಳು, ಮಲ್ಟಿಪಲ್ ಸ್ಕ್ಲೆರೋಸಿಸ್, ಪಾರ್ಕಿನ್ಸನ್ ಕಾಯಿಲೆ, ನ್ಯೂರೋ ಸೋಂಕುಗಳು, ಮೆದುಳಿನ ಗೆಡ್ಡೆಗಳು, ತಲೆಯ ಆಘಾತದಿಂದಾಗಿ ನರಮಂಡಲದ ಆಘಾತಕಾರಿ ಅಸ್ವಸ್ಥತೆಗಳು, ಇತ್ಯಾದಿ. ಡಾ.ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿಯ ವೈದ್ಯಕೀಯ ಅಧೀಕ್ಷಕರಾದ ಡಾ.ಶಶಿಕಿರಣ್ ಉಮಾಕಾಂತ್ ಮಾತನಾಡಿ, ನಮ್ಮ ಆರೋಗ್ಯ ವೃತ್ತಿಪರರ ತಂಡಕ್ಕೆ ಡಾ. ರೋಹಿತ್ ಪೈ ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಈಗ ನರ ವಿಜ್ಞಾನ ಆರೈಕೆ ಸೇವೆಗಳ ಸೇರ್ಪಡೆಯಿಂದಾಗಿ ಗುಣಮಟ್ಟದ ವೈದ್ಯಕೀಯ ಆರೈಕೆ ಮತ್ತು ರೋಗನಿರ್ಣಯವನ್ನು ಸಮುದಾಯಕ್ಕೆ ತಲುಪಿಸುವ ನಮ್ಮ ಬದ್ಧತೆಯೊಂದಿಗೆ ಹೊಂದಾಣಿಕೆಯಾಗುತ್ತದೆ. ಸಮಾಲೋಚನೆಯನ್ನು ಕಾಯ್ದಿರಿಸಲು (ಅಪಾಯಿಂಟ್‌ಮೆಂಟ್ ನಿಗದಿಪಡಿಸಲು) ಅಥವಾ ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಫೋನ್ ಸಂಖ್ಯೆ 7259032864 ಅನ್ನು ಸಂಪರ್ಕಿಸಬಹುದು.