Monday, November 25, 2024
Monday, November 25, 2024

ಯುವ ಭಾರತ್ ಫೌಂಡೇಶನ್: ಒಲಿಂಪಿಯಾಡ್ ಪರೀಕ್ಷೆ

ಯುವ ಭಾರತ್ ಫೌಂಡೇಶನ್: ಒಲಿಂಪಿಯಾಡ್ ಪರೀಕ್ಷೆ

Date:

ಉಡುಪಿ, ಅ.27: ಯುವ ಭಾರತ್ ಫೌಂಡೇಶನ್ ಸಂಸ್ಥೆ ಈ ವರ್ಷ ನಾಲ್ಕು ವಿಷಯಗಳಲ್ಲಿ (IIT-NEET Foundation, Mathematics, Space, Language) ಶಾಲಾ ವಿದ್ಯಾರ್ಥಿಗಳಿಗೆ ಒಲಿಂಪಿಯಾಡ್ (YBO) ಸ್ಪರ್ಧೆಗಳನ್ನು ನಡೆಸುತ್ತಿದೆ. ವಿಷಯ ತಜ್ಞರಿಂದ ತಯಾರಾದ ಪ್ರಶ್ನೆಪತ್ರಿಕೆಗಳು, ಭಾರತೀಯ ಜ್ಞಾನ ಪರಂಪರೆಗೆ ಒತ್ತು, ವಿದ್ಯಾರ್ಥಿಯ ಸ್ಮರಣಶಕ್ತಿ ಮಾತ್ರವಲ್ಲ ವಿಶ್ಲೇಷಣ ಸಾಮರ್ಥ್ಯ, ವಿಷಯವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ, ಹಲವು ವಿಷಯಗಳ ನಡುವಿನ ಅಂತರ್-ಸಂಬಂಧಗಳನ್ನು ಅರಿತು ಉತ್ತರ ತೆಗೆಯುವ ಸಾಮರ್ಥ್ಯ (Analytical skills, Critical thinking) ಮೊದಲಾದ ಉನ್ನತಸ್ತರದ ಸಾಮರ್ಥ್ಯಗಳ ಪರೀಕ್ಷೆ, ವಿಸ್ತೃತವಾದ ಅಂಕಪಟ್ಟಿ ಈ ಒಲಿಂಪಿಯಾಡ್ ಪರೀಕ್ಷೆಗಳ ವೈಶಿಷ್ಟ್ಯ.

ಪರೀಕ್ಷೆಗಳು ಡಿಸೆಂಬರ್ ಎರಡನೇ ವಾರದಲ್ಲಿ ಶಾಲೆಗಳಲ್ಲೇ ನಡೆಯಲಿವೆ. ಪರೀಕ್ಷೆಯ ಕುರಿತಾದ ಸಂದೇಹ-ಉತ್ತರ (Frequently Asked Questions – FAQs), ಮಾದರಿ ಪ್ರಶ್ನೆಗಳು (Sample Questions), ನೋಂದಣಿಯ ಕೊನೆಯ ದಿನಾಂಕ (Last date for registration) ಮೊದಲಾದ ಎಲ್ಲ ಮಾಹಿತಿಗಳನ್ನು ವೆಬ್‌ಸೈಟ್: http://www.yuvabharatolympiads.com ಮೂಲಕ ಪಡೆಯಬಹುದು. ಭಾರತೀಯವಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿರುವ ಯುವ ಭಾರತ್ ಸಂಸ್ಥೆಯನ್ನು ಬೆಂಬಲಿಸಿ, ಒಲಿಂಪಿಯಾಡ್ ಸ್ಪರ್ಧೆಗಳ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯ ಸ್ಪರ್ಧಾರ್ಥಿಗಳಿಗೆ ತಲುಪಿಸಿ. ಹೆಚ್ಚು ಶಾಲೆಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಸ್ಪರ್ಧೆಯು ಯಶಸ್ವಿಯಾಗಲು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!