ಉಡುಪಿ, ಅ.24: ದಿವ್ಯಾಂಗ ರಕ್ಷಣಾ ಸಮಿತಿ ಕೊಡುವೂರು, ಅಪ್ಪು ಅಭಿಮಾನಿಗಳ ಬಳಗ ಉಡುಪಿ ಮತ್ತು ಲಯನ್ಸ್ & ಲಿಯೋ ಕ್ಲಬ್ ಪರ್ಕಳ ಇವರ ಜಂಟಿ ಆಶ್ರಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಕ್ಷಯ ಮುಕ್ತ ಭಾರತದ ಯೋಜನೆ ಅಂಗವಾಗಿ ಕ್ಷಯ ಮುಕ್ತ ಉಡುಪಿ ನಗರ ಮಾಡುವ ನಿಟ್ಟಿನಲ್ಲಿ ಉಡುಪಿ ನಗರದಲ್ಲಿನ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ದಿವ್ಯಾಂಗರಿಗೆ ಧನ ಸಹಾಯ, ಗಾಲಿಕುರ್ಚಿ ವಿತರಣೆ ವಾಕರ್ ವಿತರಣೆ ಕಾರ್ಯಕ್ರಮ ಸೋಮವಾರ ಉಡುಪಿಯ ಟೌನ್ ಹಾಲ್ ನಲ್ಲಿ ನಡೆಯಿತು. ಶಾಸಕ ಯಶ್ಪಾಲ್ ಸುವರ್ಣ ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕೊಡವೂರು ವಾರ್ಡಿನಲ್ಲಿ ವಿಜಯ್ ಕೊಡವೂರು ಮುಂದಾಳತ್ವದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಇನ್ನಷ್ಟು ಜನಪರ ಕಾರ್ಯಕ್ರಮಗಳು ನಡೆಯಲಿ ಎಂದರು.
ಕಾರ್ಯಕ್ರಮದ ಸಂಯೋಜಕರಾದ ಕೆ ವಿಜಯ್ ಕೊಡವೂರು ಮಾತನಾಡುತ್ತಾ, ಕ್ಷಯ ಮುಕ್ತ ಭಾರತ ದೇಶವನ್ನು ಮಾಡಲು ಹೊರಟಿರುವಂತಹ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಯೋಜನೆಗಳನ್ನು ಉಡುಪಿ ನಗರದಲ್ಲಿ ಮಾಡಬೇಕೆಂದು ನಿಟ್ಟಿನಲ್ಲಿ ಅಪ್ಪು ಅಭಿಮಾನಿ ಬಳಗ ಮತ್ತು ಲಯನ್ಸ್ & ಲಿಯೋ ಕ್ಲಬ್ ಪರ್ಕಳ ಈ ಮೂರು ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಟಿಬಿ ಮುಕ್ತ ಉಡುಪಿ ನಗರ ಸಂಕಲ್ಪವನ್ನು ತೊಟ್ಟು 6 ತಿಂಗಳ ಕಾಲ ಉಡುಪಿ ನಗರದ ಟಿಬಿ ಸೋಂಕಿತರು ಯಾರೆಲ್ಲ ಇದ್ದಾರೆ ಅವರಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಟಿಬಿ ಮುಕ್ತ ನಗರ ಮಾಡಲು ಯೋಚನೆ ಮಾಡಿದ್ದೇವೆ ಎಂದರು.
ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷರಾದ ಹರೀಶ್ ಕೊಪ್ಪಲತೋಟ, ಲಯನ್ಸ್ ಮತ್ತು ಲಿಯೋ ಕ್ಲಬ್ ಅಧ್ಯಕ್ಷರಾದ ರಮೇಶ್ ಕುಂದರ್, ಉದ್ಯಮಿ ಅಜಯ್ ಪಿ. ಶೆಟ್ಟಿ, ಪತ್ರಕರ್ತರಾದ ಜನಾರ್ದನ ಕೊಡವೂರು, ಅಯ್ಯಪ್ಪ ಸೇವಾ ಸಮಿತಿಯ ರಾಧಾಕೃಷ್ಣ ಮೆಂಡನ್, ಪಿ.ಇ.ಎಸ್. ಫೌಂಡೇಶನ್ ಉಡುಪಿಕಾರ್ಯದರ್ಶಿ ಜಗದೀಶ್ ಭಟ್, ಮತ್ತಿತರರು ಉಪಸ್ಥಿತರಿದ್ದರು. ಅಖಿಲೇಶ್ ಎ ಕಾರ್ಯಕ್ರಮ ನಿರೂಪಿಸಿದರು.