Monday, November 25, 2024
Monday, November 25, 2024

ಐತಿಹಾಸಿಕ‌ ಗ್ರಾಮ ಬೋಳ

ಐತಿಹಾಸಿಕ‌ ಗ್ರಾಮ ಬೋಳ

Date:

ಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮವು ಕನ್ನಡದ ಮೊದಲ ತಾಮ್ರಪಟ ಶಾಸನವಾದ ಬೆಳ್ಮಣ್ಣು ತಾಮ್ರಪಟ ಶಾಸನದಲ್ಲಿ ಉಲ್ಲೇಖವಿರುವ ಬೇಲ ಗ್ರಾಮವಾಗಿದೆ. ಬೋಳದ ಊರಿನಲ್ಲಿ ಹುಟ್ಟಿದವ ಬೋಳದ ಊರನ್ನು ಸುತಿಲ್ಲವಂತೆ ಎನ್ನುವುದು ಪ್ರಚಲಿತವಾದ ಮಾತಾಗಿದೆ. ಅಸಂಖ್ಯಾತ ಗುಡ್ಡೆಗಳ ಶ್ರೇಣಿಗಳು ಇಲ್ಲಿ‌ ಇರುವುದರಿಂದ ಈ ಪ್ರದೇಶಕ್ಕೆ ಬೋಳ‌ ಎಂಬ ಹೆಸರು ಬಂದಿರಬೇಕೆಂದು ಹೇಳಲಾಗುತ್ತದೆ. ಜನಪದದ ಪ್ರಕಾರ ಪಾಡ್ದನಗಳಲ್ಲಿ ಬೋಳ ಗ್ರಾಮವನ್ನು ಬೋಳ ಮಲ್ಲಿಗೆ ಎಂದು ಉಲ್ಲೇಖಿಸಲಾಗಿದೆ.

ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಪಟ್ಟಂತೆ ಈ ಗ್ರಾಮದಲ್ಲಿ ಬೃಹತ್ ಶಿಲಾಯುಗದ ನಿಲಿಸುಗಲ್ಲು ಸಮಾಧಿಯು ಹಾಗೂ ಇತಿಹಾಸ ಕಾಲಕ್ಕೆ ಸಂಬಂಧಪಟ್ಟಂತೆ 14-15ನೇ ಶತಮಾನಕ್ಕೆ ಸಂಬಂಧಪಟ್ಟ ಶಾಸನಗಳು ಪತ್ತೆಯಾಗಿರುತ್ತದೆ. ಈ‌ ಗ್ರಾಮದಲ್ಲಿ‌ ಅನೇಕ‌ ದೇವಾಲಯಗಳಿದ್ದು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ-

ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನ: ಬೋಳದ ಗ್ರಾಮ ದೇವರಾದ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಾಲಯವು ಪುರಾಣ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವಾಗಿದೆ. ಸುಮಾರು 8ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಿಸಿದ ದೇವಾಲಯ ಎಂದು ದಾಖಲೆಗಳು ತಿಳಿಸುತ್ತವೆ. ಗರ್ಭಗುಡಿಯಲ್ಲಿ ಮಾರ್ಕಂಡೇಯ ರೇಖೆಯನ್ನು ಹೊಂದಿರುವ ಶಿವಲಿಂಗವನ್ನು ಪೂಜಿಸಲಾಗುತ್ತದೆ. ಸಾನಿಧ್ಯದಲ್ಲಿ ಗಣಪತಿಯ ಗುಡಿ ಮತ್ತು ರಕ್ತೇಶ್ವರಿ ಗುಡಿ ಇದ್ದು, ದೇವಾಲಯದ ಹೊರಭಾಗದಲ್ಲಿ ಧ್ವಜಸ್ತಂಭ, ಸುತ್ತು ಪೌಳಿ ಮತ್ತು ಗೋಪುರವನ್ನು ಕಾಣಬಹುದು. ದೇವಾಲಯದ ಮುಂಭಾಗ ವಿಶಾಲವಾದ ಕೆರೆ, ಶಾಂಭವಿ ನದಿ, ಪಶ್ಚಿಮಕ್ಕೆ ಆಂಜನೇಯ ಸಾನಿಧ್ಯ, ಪೂರ್ವಕ್ಕೆ ಬ್ರಹ್ಮಲಿಂಗೇಶ್ವರ ಸನ್ನಿಧಿ, ಇದರೊಂದಿಗೆ ಪಾಳು ಬಿದ್ದ ಅರಮನೆಯ ಕುರುಹುಗಳು, ಬ್ರಹ್ಮರಥದ ಅವಶೇಷಗಳಿವೆ. ದೇವಾಲಯದ ವರ್ಷಾವಧಿ ಉತ್ಸವದ ಸಂಧರ್ಭದಲ್ಲಿ ರಥೋತ್ಸವವು ನಡೆಯುತ್ತದೆ.‌ ಈ ಗ್ರಾಮದಲ್ಲಿ 6 ಕೆರೆಗಳು ಮತ್ತು 16 ಗುತ್ತುಗಳನ್ನು ಕಾಣಬಹುದು.

ಮಹಾಲಿಂಗೇಶ್ವರ ದೇವಸ್ಥಾನ: ಮಂಜರಪಲ್ಕೆಯಿಂದ ಬೆಳುವಾಯಿಗೆ ಹಾದು ಹೋಗುವ ಮುಖ್ಯ ರಸ್ತೆಯ ಸಮೀಪದಲ್ಲಿರುವ ಈ ದೇವಾಲಯಕ್ಕೆ ಬರಲು ಪೂರ್ವ ಭಾಗದಲ್ಲಿ ಮೆಟ್ಟಿಲುಗಳನ್ನು ಮಾಡಲಾಗಿದೆ. ಸುಮಾರು 700 ವರ್ಷಗಳ ಹಿಂದೆ ಸಾಮಂತ ಅರಸನಾಗಿದ್ದ ಪಿಲಿಯೂರು ಪರಾಡಿಯವರು ಈ ದೇವಾಲಯವನ್ನು ಪಿಲಿಯೂರು ಪ್ರದೇಶದಲ್ಲಿ ನಿರ್ಮಿಸಿದರೆಂಬ ಐತಿಹ್ಯವಿದೆ. ಈ ಪ್ರದೇಶದಲ್ಲಿ ದಟ್ಟವಾದ ಕಾಡು ಇದ್ದು, ಹುಲಿಗಳು ವಾಸಿಸುತ್ತಿದ್ದುದರಿಂದ ಇಲ್ಲಿಗೆ ಪಿಲಿಯೂರು/ಪಿಲಿಯೂರು ಪದವು ಎಂದು‌ ಹೆಸರು ಬಂತು.

ಶಿಲಾಮಯವಾಗಿರುವ ಗರ್ಭಗುಡಿಯಲ್ಲಿ ಈಶ್ವರನ್ನು ಪೂಜಿಸುತ್ತಿದ್ದು, ಪ್ರಸ್ತುತ ಗರ್ಭಗುಡಿಯ ಮೇಲ್ಛಾವಣಿಗೆ ತಾಮ್ರವನ್ನು ಮುಚ್ಚಲಾಗಿದ್ದು, ಗರ್ಭಗುಡಿಗೆ ಅಭಿಮುಖವಾಗಿ ನಂದಿ ಮಂಟಪವಿದೆ. ದೇವಾಲಯದ ಹೊರಭಾಗದಲ್ಲಿ ಸುತ್ತ ಪೌಳಿ (ಪ್ರಾಕಾರ) ಮತ್ತು ಗೋಪುರವನ್ನು ನೋಡಬಹುದು.

ಸಿರಿ ಬ್ರಹ್ಮಕುಮಾರ ಆಲಯ, ಮುಗುಳಿ: ತುಳು ಭಾಷೆಯಲ್ಲಿ ಮುಗುಳಿ ಎಂದರೆ ಕಳಶ ಎಂದರ್ಥ. ಚೂಪಾಗಿ ಚಾಚಿಕೊಂಡಿರುವ ಗುಡ್ಡಕ್ಕೆ ಕಳಶವಿಟ್ಟಂತೆ ಸಿರಿ ಬ್ರಹ್ಮಕುಮಾರ ಆಲಯವು ಗುಡ್ಡದ ತುತ್ತ ತುದಿಯಲ್ಲಿ ಅನಾದಿ ಕಾಲದಿಂದಲೂ ಆಲಡೆ ಕ್ಷೇತ್ರವಾಗಿ ಆರಾಧಿಸಲ್ಪಡುತ್ತಿದೆ. ಇತ್ತೀಚೆಗೆ ಜೀರ್ಣೋದ್ಧಾರಗೊಂಡಿರುವ ಆಲಡೆ ಆಯನ ಸಿರಿ – ಕುಮಾರ, ಅಬ್ಬಗ-ದಾರಗ ದಿವ್ಯಕ್ಷೇತ್ರ ಬೋಳ ಸೋಮನಾಥೇಶ್ವರ ದೇವಾಲಯದ ಬಳಿಯಲ್ಲಿಯೇ ಇದೆ.

ಸಂಗ್ರಹ: ಶ್ರೇಯ ದೇವಾಡಿಗ, ಪ್ರಥಮ ಬಿ.ಎ ವಿದ್ಯಾರ್ಥಿನಿ, ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!