ಉಡುಪಿ, ಅ. 12: ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 15ರಿಂದ ಅಕ್ಟೋಬರ್ 23ರ ವರೆಗೆ ನವರಾತ್ರಿ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಆ ಪ್ರಯುಕ್ತ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಸಂಜೆ ಗಂಟೆ 06-00ರಿಂದ ರಾತ್ರಿ ಗಂಟೆ 08-30ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಅಕ್ಟೋಬರ್ 15ರಂದು ಆದಿತ್ಯವಾರ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಮತ್ತು ಬೆಳ್ಮಣ್ಣು ಶ್ರೀ ವಿಠೋಬಾ ರುಕ್ಮಾಯಿ ಭಜನಾ ಮಂಡಳಿಯ ಸದಸ್ಯರಿಂದ ‘ಹರಿ ಸಂಕೀರ್ತನೆ’ ಅಕ್ಟೋಬರ್ 16 ರಂದು ಸೋಮವಾರ ಕಾಮಿಡಿ ಕಿಲಾಡಿ ಖ್ಯಾತಿಯ ಯಕ್ಷ ಹಾಸ್ಯ ಕಲಾವಿದ ಶ್ರೀ ಮಹಾಬಲೇಶ್ವರ ಭಟ್ ಕ್ಯಾದಗಿಯವರ ಪರಿಕಲ್ಪನೆ,
ನಿರ್ದೇಶನ ಅಭಿನಯದ ಏಕವ್ಯಕ್ತಿ ನವರಸಾಭಿವ್ಯಕ್ತಿ ‘ಪುಷ್ಪಕಯಾನ’ ಅಕ್ಟೋಬರ್ 17ರಂದು ಮಂಗಳವಾರ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ಶೋಭಾನೆ ಬಳಗದವರಿಂದ ‘ವೈವಿಧ್ಯಮಯ ಕಾರ್ಯಕ್ರಮ’ ಅಕ್ಟೋಬರ್ 18 ರಂದು ಬುಧವಾರ ಬೆಳ್ಮಣ್ಣು ಜೇಸಿಐ ಸಂಗೀತ ಮತ್ತು ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ (ವಿದ್ವಾನ್ ಸುಬ್ರಹ್ಮಣ್ಯ ನಾವುಡರ ಶಿಷ್ಯೆಯರಿಂದ) ‘ಭರತನಾಟ್ಯ, ನೃತ್ಯ ರೂಪಕ ಮತ್ತು ಸಂಗೀತ ಕಾಯಕ್ರಮ’ ಅಕ್ಟೋಬರ್ 19 ರಂದು ಶ್ರೀ ಶಾರದ ನಾಟ್ಯಲಯ ಕುಳಾಯಿ, ಹೊಸಬೆಟ್ಟು ಇದರ ನಿರ್ದೇಶಕಿ ವಿದುಷಿ ಭಾರತಿ ಸುರೇಶ್ ಇವರ ಶಿಷ್ಯೆಯರಿಂದ ‘ನೃತ್ಯ ಸಂಭ್ರಮ’ ಅಕ್ಟೋಬರ್ 20ರಂದು ಬೋಳ ನಮಿತಾ ಮತ್ತು ಬಳಗದವರಿಂದ ‘ಭಕ್ತಿ ರಸಮಂಜರಿ ಕಾರ್ಯಕ್ರಮ’ ಅಕ್ಟೋಬರ್ 21 ರಂದು ಯಕ್ಷ ಮಂಜುಳಾ ಕದ್ರಿ, ಮಂಗಳೂರು ಮಹಿಳಾ ತಾಳಮದ್ದಲೆ ಬಳಗದವರಿಂದ ‘ಶ್ರೀ ಶಕ್ತಿ ದೇವಿ ಮಹಾತ್ಮೆ’ ಅಕ್ಟೋಬರ್ 22ರಂದು ಯಕ್ಷ ಕದ್ರಿ ಮಹಿಳಾ ಬಳಗದವರಿಂದ ‘ತಾಳಮದ್ದಲೆ’ ಪ್ರಸಂಗ: ಗದಾಯುದ್ಧ
ಅಕ್ಟೋಬರ್ 23ರಂದು ಸ್ಥಳೀಯ ಪ್ರತಿಭೆಗಳಿಂದ ವಿವಿಧ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಶ್ರೀ ದುರ್ಗಾನುಗ್ರಹ ಪ್ರಶಸ್ತಿ ಪ್ರಧಾನ ನವರಾತ್ರಿ ಪ್ರಯುಕ್ತ ಪ್ರತಿ ದಿವಸ ಸಂಜೆ ಗಂಟೆ 06- 30ರಿಂದ ರಾತ್ರಿ ಗಂಟೆ 08-00ರ ತನಕ ವಿವಿಧ ಭಜನಾ ಮಂಡಳಿಗಳಿಂದ ಶ್ರೀ ಕ್ಷೇತ್ರದ ಆವರಣದಲ್ಲಿ ‘ನೃತ್ಯ ಭಜನಾ ಕಾರ್ಯಕ್ರಮ’ ಜರಗಲಿದೆ ಎಂದು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಬಿ. ಕೆ. ವಿಘ್ನೇಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.