Tuesday, November 26, 2024
Tuesday, November 26, 2024

ಉಡುಪಿ ನಗರಸಭೆ: ಕುಡಿಯುವ ನೀರಿನ ದರ ಪರಿಷ್ಕರಣೆ

ಉಡುಪಿ ನಗರಸಭೆ: ಕುಡಿಯುವ ನೀರಿನ ದರ ಪರಿಷ್ಕರಣೆ

Date:

ಉಡುಪಿ, ಅ.6: ಉಡುಪಿ ನಗರಸಭೆಯ ವತಿಯಿಂದ ಕುಡಿಯುವ ನೀರಿನ ಬಳಕೆಯ ಶುಲ್ಕವನ್ನು ಪರಿಷ್ಕರಿಸಿ, ದರ ಏರಿಕೆ ಮಾಡಲಾಗಿದೆ. ಸರಕಾರದ ಆದೇಶದಂತೆ ಕುಡಿಯುವ ನೀರಿನ ದರವನ್ನು ಪ್ರತಿ 3 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಿದ್ದು, ಕಳೆದ 12 ವರ್ಷಗಳಲ್ಲಿ ದರವನ್ನು ಪರಿಷ್ಕರಿಸಲಾಗಿರುವುದಿಲ್ಲ. ಪ್ರಸ್ತುತ ವಿದ್ಯುತ್, ಇತರೇ ನಿರ್ವಹಣಾ ವೆಚ್ಚಗಳು ಅಧಿಕವಾಗಿರುವುದರಿಂದ ದರವನ್ನು ಪರಿಷ್ಕರಿಸುವುದು ಅನಿವಾರ್ಯವಾಗಿದ್ದು, ನವೆಂಬರ್ 1 ರಿಂದ ಅನ್ವಯವಾಗುವಂತೆ ಕುಡಿಯುವ ನೀರಿನ ಬಳಕೆ ಶುಲ್ಕವನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗುವುದು.

ಒಂದು ಸಾವಿರ ಲೀಟರ್ ನೀರು: ಗೃಹ ಬಳಕೆಗೆ 8 ಸಾವಿರ ಲೀ. ವರೆಗೆ 11 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 15 ರೂ., 15 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 20 ರೂ. ಹಾಗೂ 20,000 ಲೀ. ಗಿಂತ ಅಧಿಕ ಬಳಕೆಯಾದಲ್ಲಿ 30 ರೂ. ವಿಧಿಸಲಾಗುವುದು. ಗೃಹೇತರ ಬಳಕೆಗೆ 8 ಸಾವಿರ ಲೀ. ವರೆಗೆ 25 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆಯಾದಲ್ಲಿ 35 ರೂ., 15 ಸಾವಿರ ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 50 ರೂ., ವಿಧಿಸಲಾಗುವುದು. ವಾಣಿಜ್ಯ/ ಕೈಗಾರಿಕೆಗೆ 8 ಸಾವಿರ ಲೀ. ವರೆಗೆ 50 ರೂ., 8 ಸಾವಿರ ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 60 ರೂ. ಹಾಗೂ 15,000 ಲೀ. ಮೇಲ್ಪಟ್ಟು ಬಳಕೆ ಮಾಡಿದ್ದಲ್ಲಿ 70 ರೂ. ವಿಧಿಸಲಾಗುವುದು. ಪ್ರತೀ ಸಂಪರ್ಕಕ್ಕೆ ಗೃಹ ಬಳಕೆಗೆ 88 ರೂ. ಗೃಹೇತರ ಸಂಪರ್ಕಕ್ಕೆ 200 ರೂ. ಹಾಗೂ ವಾಣಿಜ್ಯ/ ಕೈಗಾರಿಕೆಗಳ ಸಂಪರ್ಕಕ್ಕೆ 400 ರೂ. ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!