ಉಡುಪಿ, ಸೆ. 27: ಭಾವಿ ಪರ್ಯಾಯ ಪುತ್ತಿಗೆ ಮಠ ಇದರ ಶ್ರೀ ಪುತ್ತಿಗೆ ಪರ್ಯಾಯೋತ್ಸವ 2024-2026 ಇದರ ಸಮಾಲೋಚನಾ ಸಭೆಯು ಅನಿವಾಸಿ ಭಾರತೀಯರೊಂದಿಗೆ ಮಂಗಳವಾರ ದುಬೈನ ಫಾರ್ಚುನ್ ಆರ್ಟಿಮ ಹೋಟೆಲ್ ನಲ್ಲಿ ನಡೆಯಿತು.
ಶ್ರೀ ಪುತ್ತಿಗೆ ಪರ್ಯಾಯೋತ್ಸವ 2024-2026 ಸಮಿತಿ ಕಾರ್ಯಧ್ಯಕ್ಷರಾದ ಮಾಜಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಪರ್ಯಾಯೋತ್ಸವ ಯಶಸ್ವಿಗೊಳಿಸುವ ಕಾರ್ಯಯೋಜನೆ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದರು. ಸಭೆಯಲ್ಲಿ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಶರತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.