Monday, October 21, 2024
Monday, October 21, 2024

ಹೆಚ್ಚು ಉದ್ಯೋಗ ದೊರೆಯುವ ಕೈಗಾರಿಕಾ ಘಟಕಗಳಿಗೆ ಆರ್ಥಿಕ ನೆರವು ನೀಡಿ: ಶೋಭಾ ಕರಂದ್ಲಾಜೆ

ಹೆಚ್ಚು ಉದ್ಯೋಗ ದೊರೆಯುವ ಕೈಗಾರಿಕಾ ಘಟಕಗಳಿಗೆ ಆರ್ಥಿಕ ನೆರವು ನೀಡಿ: ಶೋಭಾ ಕರಂದ್ಲಾಜೆ

Date:

ಉಡುಪಿ, ಸೆ.25: ಜಿಲ್ಲೆಯಲ್ಲಿ ಯುವಜನರಿಗೆ ಹೆಚ್ಚು ಉದ್ಯೋಗ ದೊರೆಯುವಂತಹ ಆಹಾರ ಸಂಸ್ಕರಣಾ ಘಟಕ ಸೇರಿದಂತೆ ಮತ್ತಿತರ ಕೈಗಾರಿಕೆಗಳನ್ನು ಸ್ಥಾಪಿಸಲು ಆರ್ಥಿಕ ನೆರವನ್ನು ನೀಡಲು ಹೆಚ್ಚಿನ ಆದ್ಯತೆಯನ್ನು ಬ್ಯಾಂಕ್‌ಗಳು ನೀಡಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕ್‌ಗಳು ಜನಸ್ನೇಹಿಯಾಗಿ ಗ್ರಾಹಕರೊಂದಿಗೆ ವ್ಯವಹರಿಸಬೇಕು. ಸರಕಾರದ ಯೋಜನೆಗಳ ಫಲಾನುಭವಿಗಳು ಆರ್ಥಿಕ ನೆರವನ್ನು ಕೋರಿ ಬಂದ ಅರ್ಜಿಗಳನ್ನು ವಿಳಂಬವಿಲ್ಲದೇ ಅವರುಗಳನ್ನು ಬ್ಯಾಂಕ್‌ಗಳಿಗೆ ಅಲೆದಾಡಿಸದೇ ನಿಯಮಾನುಸಾರವಾಗಿ ವಿಲೇವಾರಿ ಮಾಡಿ, ನೆರವನ್ನು ಕಲ್ಪಿಸಬೇಕು ಎಂದರು. ಸರಕಾರದ ಸಬ್ಸಿಡಿ ಆಧಾರಿತ ಯೋಜನೆಗಳ ಆಯ್ಕೆಯಾಗಿ ವಿವಿಧ ಇಲಾಖೆಗಳಿಂದ ಬಂದ ಫಲಾನುಭವಿಗಳು ಇದರ ಲಾಭ ಪಡೆಯಲು ಬ್ಯಾಂಕ್‌ಗಳಿಗೆ ಯಾವೆಲ್ಲಾ ನಿಖರ ದಾಖಲೆಗಳನ್ನು ಹಾಜರುಪಡಿಸಬೇಕು, ಯಾವ ಕಾರಣಕ್ಕೆಲ್ಲಾ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂಬ ಸವಿವರವಾದ ಮಾಹಿತಿಗಳನ್ನು ಗ್ರಾಮ ಪಂಚಾಯತ್ ಕಚೇರಿಯ ಸೂಚನಾ ಫಲಕಗಳಲ್ಲಿ ಕರಪತ್ರಗಳನ್ನು ಪ್ರದರ್ಶಿಸಿದ್ದಲ್ಲಿ ವಿನಾಕಾರಣ ಗೊಂದಲಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಎಂದರು.

ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಿರುವ ಸ್ಥಳದ ಅವಕಾಶವನ್ನು ಒದಗಿಸಲು ಮುಂದಾಗುವುದರ ಜೊತೆಗೆ ಅವುಗಳು ದೊಡ್ಡ ಮಟ್ಟದಲ್ಲಿ ಬೆಳೆಸಲು ಇಲಾಖೆಯ ಅಧಿಕಾರಿಗಳು ಯೋಚಿಸಬೇಕು ಎಂದರು. ಕೃಷಿ, ಮೀನುಗಾರಿಕೆಗಳಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಸಾಲಗಳನ್ನು ವಿತರಿಸಲು ಆದ್ಯತೆ ನೀಡಬೇಕು ಎಂದ ಅವರು, ಜಿಲ್ಲೆಯಲ್ಲಿ ಮೀನು ಉತ್ಪಾದನೆ ಹೇರಳವಾಗಿದ್ದರೂ, ಇಲ್ಲಿಂದ ವಿದೇಶಗಳಿಗೆ ರಫ್ತು ಆಗದೇ ನೆರೆ ರಾಜ್ಯ ಕೇರಳಕ್ಕೆ ಹೋಗಿ ಅಲ್ಲಿಂದ ಹೊರದೇಶಗಳಿಗೆ ಹೋಗುತ್ತಿವೆ. ಅದು ಇಲ್ಲಿಂದಲೇ ಆಗುವಂತೆ ಉತ್ತೇಜಿಸಬೇಕು ಎಂದರು. ಮುದ್ರಾ ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಲು ಬಂದಾಗ ಅವುಗಳಲ್ಲಿ ಹೆಚ್ಚು ತಿರಸ್ಕಾರ ವಾಗುತ್ತಿವೆ ಎಂಬ ಬಗ್ಗೆ ಗಂಭೀರಬ ಆರೋಪ ಕೇಳಿ ಬರುತ್ತಿವೆ. ಅಲ್ಲದೇ ಈ ಯೋಜನೆಯು ನಿಂತು ಹೋಗಿದೆ ಎಂದು ಹೇಳುತ್ತಿರುವುದು ಸಹ ಕೇಳಿ ಬರುತ್ತಿದೆ. ಬ್ಯಾಂಕಿನವರು ಇದಕ್ಕೆ ಆಸ್ಪದ ನೀಡದೇ ಸರ್ಕಾರದ ನಿರ್ದೇಶನವನ್ನು ಸರಿಯಾಗಿ ಪಾಲಿಸಿ, ಈ ಯೋಜನೆಯಡಿ ಜನರಿಗೆ ನೆರವು ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ 52,675 ಕೋಟಿ ರೂ. ಗಳಷ್ಟು ವ್ಯವಹಾರ ನಡೆದು, ಶೇ. 9.08 ರಷ್ಟು ಪ್ರಗತಿ ಸಾಧಿಸಿದೆ. ಕಳೆದ ಬಾರಿಗಿಂತ 4386 ಕೋಟಿ ಹೆಚ್ಚಾಗಿದೆ ಎಂದರು. ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಬ್ಯಾಂಕ್‌ಗಳೂ ಶೇ. 108 ರಷ್ಟು ಪ್ರಗತಿ ಸಾಧಿಸಿವೆ. 173 ರಷ್ಟು ಗುರು ಇದ್ದು, 187 ರಷ್ಟು ಸಾಧನೆಯಾಗಿ 20.41 ಕೋಟಿ ರೂ. ಗಳಷ್ಟು ಉದ್ಯೋಗ ಸಾಲವಾಗಿ ನೀಡಲಾಗಿದೆ ಎಂದರು. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ 2819 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಿ, ಮೊದಲನೇ ಹಂತದಲ್ಲಿ 4162 ಜನರಿಗೆ ಸಾಲ ವಿತರಿಸಿ, ರಾಜ್ಯದಲ್ಲಿಯೇ ಈ ಯೋಜನೆ ಅನುಷ್ಠಾನದಲ್ಲಿ ಮೊದಲನೇ ಸ್ಥಾನದಲ್ಲಿದೆ. ಎರಡನೇ ಹಂತದಲ್ಲಿ 2101 ಜನರಿಗೆ ಸಾಲ ವಿತರಿಸುವ ಗುರಿ ಇದ್ದು, ಈಗಾಗಲೇ 1702 ಜನರಿಗೆ ಸಾಲ ವಿತರಿಸಲಾಗಿದೆ ಎಂದರು. ಸಭೆಯಲ್ಲಿ ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಬೆಂಗಳೂರು ಎಫ್.ಐ.ಡಿ.ಡಿ ಸೆಕ್ಷನ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎಕ್ಸಿಕ್ಯುಟಿವ್ ತನು ನಂಜಪ್ಪ, ನಬಾರ್ಡ್ ಬ್ಯಾಂಕ್ ಸಂಗೀತಾ ಕಾರ್ಥಾ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರೀಜನಲ್ ಮ್ಯಾನೆಜರ್ ಮನೋಜ್ ಸಾಲಿಯಾನ್, ಕರ್ನಾಟಕ ಬ್ಯಾಂಕ್‌ನ ರೀಜನಲ್ ಮ್ಯಾನೆಜರ್ ರಾಜಗೋಪಾಲನ್ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಪಿ.ಎಂ. ಪಿಂಜಾರ ಸ್ವಾಗತಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸ್ವಚ್ಛತೆ ಎಂಬುದು ಜವಾಬ್ದಾರಿ: ವಿವೇಕ್ ಆಳ್ವ

ವಿದ್ಯಾಗಿರಿ, ಅ.21: ಕಡಲ ಕಿನಾರೆಯಲ್ಲಿ ಬಂದು ಬೀಳುವ ಯಾವುದೇ ಕಸ ಅದು...

ತುಳಸಿ ಅಭಿಯಾನ

ಕೋಟ, ಅ.21: ಪಂಚವರ್ಣ ಸಂಸ್ಥೆಯ ಕ್ರೀಯಾಶೀಲತೆ ಇತರ ಸಂಘ್ಜ ಸಂಸ್ಥೆಗಳಿಗೆ ಮಾದರಿ...

ಅಂಗಾಂಗ ದಾನದ ಅರಿವು

ಕೋಟ, ಅ.21: ಸ್ನೇಹಕೂಟ ಮಣೂರು ಇದರ ಅಕ್ಟೋಬರ್ ತಿಂಗಳ ಕಾರ್ಯಕ್ರಮ ಮಣೂರು...

ಕೊಲ್ಲೂರು: ಚಿನ್ನಾಭರಣವಿದ್ದ ಪರ್ಸ್ ಕಳವು

ಕೊಲ್ಲೂರು, ಅ.20: ಕೇರಳದ ಸಾಯಿಪ್ರಸನ್ನ ಎಂಬವರು ದಿನಾಂಕ 18/10/2024 ರಂದು ಸಂಜೆ...
error: Content is protected !!