ಮುಂಬಯಿ, ಸೆ. 22: ದೇಶದ ಪ್ರಖ್ಯಾತ ಗಣೇಶೋತ್ಸವಗಳಲ್ಲಿ ಪ್ರಮುಖವಾಗಿರುವ ಮುಂಬೈ ಮಹಾನಗರದ ಕಿಂಗ್ಸ್ ಸರ್ಕಲ್ ಸಮೀಪದಲ್ಲಿ ಪೂಜಿಸಲ್ಪಡುವ ಜಿ.ಎಸ್.ಬಿ ಸೇವಾ ಮಂಡಲದ 69 ನೇ ಶ್ರೀ ಗಣೇಶೋತ್ಸವದಲ್ಲಿ ಶುಕ್ರವಾರ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಪಾಲ್ಗೊಂಡರು.
ಕುಟುಂಬ ಸಮೇತ ತುಲಾಭಾರ ಸೇವೆ ಸಮರ್ಪಿಸಿ ಮಾತನಾಡಿದ ವೇದವ್ಯಾಸ ಕಾಮತ್, ಜಿ ಎಸ್ ಬಿ ಸೇವಾ ಮಂಡಲದ ಗಣೇಶೋತ್ಸವದಲ್ಲಿ ಪ್ರತಿ ವರ್ಷ ಪಾಲ್ಗೊಳ್ಳುವ ಭಾಗ್ಯ ದೇವರ ಕೃಪೆಯಿಂದ ಸಿಗುತ್ತಿದೆ. ಈ ಬಾರಿ ನಮ್ಮ ಇಡೀ ಕುಟುಂಬ, ಆಪ್ತ ಬಳಗ, ಹಿತೈಷಿಗಳ ಸಮೇತ ಮಂಗಳೂರಿನಿಂದ ಆಗಮಿಸುವ ಅವಕಾಶ ಸಿಕ್ಕಿದೆ. ಎರಡನೇ ಬಾರಿ ಶಾಸಕನಾಗಿ ಕ್ಷೇತ್ರದ ಜನರ ಸೇವೆ ಸಲ್ಲಿಸುವ ಅವಕಾಶ ಭಗವಂತ ಕರುಣಿಸಿದ್ದಾನೆ. ಕ್ಷೇತ್ರದ ಅಭಿವೃದ್ಧಿ, ನಾಡಿನ ಏಳಿಗೆಗಾಗಿ ಪ್ರಾರ್ಥಿಸಲಾಯಿತು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ವಾಸುದೇವ್ ಕಾಮತ್, ಬಿಜೆಪಿ ಮುಖಂಡರಾದ ಸಂಜಯ್ ಪ್ರಭು, ವಸಂತ ಪೂಜಾರಿ, ಸಂಜಯ್ ಪೈ, ಕುಟುಂಬ ವರ್ಗ, ಆಪ್ತ ಸಹಾಯಕರು ಉಪಸ್ಥಿತರಿದ್ದರು.