Saturday, October 19, 2024
Saturday, October 19, 2024

ರಾಮಮಂದಿರ ರಾಷ್ಟ್ರಮಂದಿರವಾಗಲಿದೆ: ಮೋಹನ್ ಭಾಗವತ್

ರಾಮಮಂದಿರ ರಾಷ್ಟ್ರಮಂದಿರವಾಗಲಿದೆ: ಮೋಹನ್ ಭಾಗವತ್

Date:

ಮುಂಬಯಿ, ಸೆ. 20: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭಗವಾನ್ ಶ್ರೀ ರಾಮಚಂದ್ರನ ದೇವಾಲಯ ಭವಿಷ್ಯದಲ್ಲಿ ರಾಷ್ಟ್ರಮಂದಿರವಾಗಲಿದೆ. ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಸಂಪೂರ್ಣವಾಗಲು ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಹೇಳಿದರು.
ಅವರು ಮುಂಬೈ ಕಿಂಗ್ಸ್‌ ಸರ್ಕಲ್ ಬಳಿ ಜಿ.ಎಸ್.ಬಿ ಸೇವಾ ಮಂಡಲದ ವತಿಯಿಂದ ಪೂಜಿಸಲ್ಪಡುತ್ತಿರುವ 69ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ತುಲಾಭಾರ ಸೇವೆ ಸಮರ್ಪಿಸಿ ಯಾಗದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾವು ಪ್ರಯತ್ನ ಮಾಡುವತ್ತ ದೃಢ ಸಂಕಲ್ಪ ಮಾಡಬೇಕು. ಫಲ ನೀಡುವುದು ಭಗವಂತನ ಕೈಯಲ್ಲಿದೆ. ನಾವು ಉತ್ತಮ ಹಾದಿಯಲ್ಲಿ ನಡೆದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ಅವರು ಹೇಳಿದರು. ಮೋಹನ್ ಭಾಗವತ್ ಅವರಿಗೆ ತೆಂಗಿನಕಾಯಿ ತುಲಾಭಾರ ನಡೆಸಲಾಯಿತು. ಜಿ.ಎಸ್.ಬಿ ಮಂಡಲದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ: ಮೈ ಮರೆತರೆ ಕಾದಿದೆ ಅಪಾಯ

ಉಡುಪಿ, ಅ.19: ಉಡುಪಿ ನಗರದ ಕಲ್ಸಂಕ ಮಣಿಪಾಲ ರಸ್ತೆಯ ಮಾಲ್ ಒಂದರ...

ಅಧ್ಯಯನ ಪ್ರವಾಸ

ಕುಂದಾಪುರ, ಅ.19: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ...

ಸ್ಯಾಮ್ ಸಂಗ್ ಸಾಲ್ವ್ ಫಾರ್ ಟುಮಾರೊ 2024 ಫಲಿತಾಂಶ ಪ್ರಕಟ

ಉಡುಪಿ, ಅ.19: ಸ್ಯಾಮ್ ಸಂಗ್ ಇಂಡಿಯಾ ಕಂಪನಿಯ ಪ್ರಮುಖ ರಾಷ್ಟ್ರೀಯ ಶಿಕ್ಷಣ...

ಮಕ್ಕಳಿಗೆ ಎಳವೆಯಲ್ಲಿಯೇ ವೇದಿಕೆ ಕಲ್ಪಿಸಿ: ಗೀತಾ ಆನಂದ್ ಕುಂದರ್

ಕೋಟ, ಅ.19: ಎಳವೆಯಲ್ಲಿಯೇ ಮಕ್ಕಳಿಗೆ ಸಮರ್ಪಕ ವೇದಿಕೆ ಕಲ್ಪಿಸಿಕೊಡಬೇಕು, ಮಕ್ಕಳ ಪ್ರಥಮ...
error: Content is protected !!