ಉಡುಪಿ, ಸೆ.14: ಕೇಂದ್ರ ಪುರಸ್ಕೃತ ಪಿ.ಎಂ.ಎಂ.ಎಸ್.ವೈ ಯೋಜನೆಯಡಿ ಪ್ರಮೋಶನ್ ಆಫ್ ಸಸ್ ಟೈನೇಬಲ್ ಫಿಷೆರೀಸ್ ಅಂಡ್ ಲೈವ್ಲಿಹುಡ್ಸ್ ಥ್ರೂ ಆರ್ಟಿಫಿಷಿಯಲ್ ರೀಫ್ಸ್ ಅಂಡ್ ಆರ್ ಸೀ ರಾಂಚಿಂಗ್ ಕಾರ್ಯಕ್ರಮ ಮಲ್ಪೆ ಮೀನುಗಾರರ ಸಂಘದ ಸಮುದಾಯ ಭವನದಲ್ಲಿ ನಡೆಯಿತು. ವಿಶಾಖಪಟ್ಟಣಂ ಸಿ.ಎಂ.ಎಫ್.ಆರ್. ಐ ಸೈಂಟಿಸ್ಟ್ ಅಂಡ್ ಹೆಡ್ ರೀಜನಲ್ ಸೆಂಟರ್ ನ ಪ್ರಾಂಶುಪಾಲ ಡಾ. ಜೋ .ಕೆ. ಕಿಝಾಕುದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ ಸುವರ್ಣ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಅರ್., ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಅಂಜನಾ ದೇವಿ ಟಿ., ಮಲ್ಪೆ ಮೀನುಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಉಡುಪಿಯ ಮೀನುಗಾರಿಕೆ ಸಹಾಯಕ ನಿರ್ದೇಶಕ ನಾರಾಯಣ ಎಫ್., ಕಾಪಡ ಸ್ಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.