ಮಂಗಳೂರು, ಸೆ. 13: ಮಂಗಳೂರು ರಥಬೀದಿಯ ಡಾ. ಪಿ ದಯಾನಂದ ಪೈ- ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ’ ನಡೆಯಿತು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮಿಥುನ್ಚಂದ್ರ ಅತಿಥಿಯಾಗಿ ಶುಭ ಹಾರೈಸಿದರು. ಹಣಕಾಸಿನ ಸಾಕ್ಷರತೆ ಬಗ್ಗೆ ಯ್ವೋನಿಲ್ ಡಿ’ಸೋಜಾ, ಹಣಕಾಸಿನ ಮೂಲಭೂತ ವಿಷಯಗಳ ಬಗ್ಗೆ ಲಿಯೋ ಅಮಲ್ ಎ., ಹಾಗೂ ವೈಯಕ್ತಿಕ ಹಣಕಾಸಿನ ಯೋಜನೆ ಕುರಿತು ಸಪ್ನ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸುವರ್ಣಮಾಲಿನಿ ಬಿ ಸ್ವಾಗತಿಸಿದರು.
ಹಿರಿಯ ಉಪನ್ಯಾಸಕ ಡಾ. ವಾಲ್ಟರ್ ಡಿ’ಸೋಜಾ ವಂದಿಸಿದರು. ಮಂಗಳೂರು ವಿವಿ ವಾಣಿಜ್ಯ ಉಪನ್ಯಾಸಕರ ಸಂಘದ ಸಹಭಾಗಿತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲೂಯಿಸ್ ಮನೋಜ್ ಅಂಬ್ರೋಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಕಾಂ ವಿದ್ಯಾರ್ಥಿನಿ ವರ್ಣಶ್ರೀ ಕಾರ್ಯಕ್ರಮ ನಿರೂಪಿಸಿದರು. ಡಾ. ಜ್ಯೋತಿಪ್ರಿಯಾ, ನಾಗರಾಜ, ಡಾ. ಮಾಲತಿ, ಡಾ. ಲೋಕೇಶನಾಥ್, ಮೋಹಿನಿ ಸಹಿತ ೧೫ ಉಪನ್ಯಾಸಕರು ಅಂತಿಮ ಬಿಕಾಂನ ೩೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರು.