ಉಡುಪಿ, ಸೆ. 10: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಟಿ.ರೇಜು ಅವರು ಹೆಬ್ರಿ ಹನಿ ಮಧುವನ ಸಂಜೀವಿನಿ ಜೇನು ಸಂಸ್ಕರಣಾ ಘಟಕ ಹಾಗೂ ಉಡುಪಿ ಸಂಜೀವಿನಿ ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿದರು. ಒಂದು ಸೂಪರ್ ಮಾರ್ಕೆಟ್ ನಿಂದಾಗಿ ಹಲವಾರು ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಜೀವನೋಪಾಯ ರೂಪಿಸಿಕೊಳ್ಳಲು ಅನುಕೂಲವಾಗಿದೆ. ಈ ಸುವರ್ಣಾವಕಾಶ ಸಂಜೀವಿನಿ ಒಕ್ಕೂಟಕ್ಕೆ ಒದಗಿ ಬಂದಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಯಶಸ್ವಿಯಾಗಿ ಎಲ್ಲರಿಗೂ ಮಾದರಿಯಾಗಿ ಎಂದು ಶುಭ ಹಾರೈಸಿದರು.
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ್ಕುಮಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಎಚ್., ಯೋಜನಾ ನಿರ್ದೇಶಕರಾದ ಗುರುದತ್ತ್ ಎಂ. ಎನ್., ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿ’ಸಿಲ್ವ, ಉಡುಪಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.