ಉಡುಪಿ, ಸೆ. 5: ಸೇವಾಭಾರತಿ ಕನ್ಯಾಡಿ ಹಾಗೂ ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಇವರ ವತಿಯಿಂದ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಕಾರ್ಯಾಗಾರ ಉಡುಪಿ ತಾಲೂಕು ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ದಿವ್ಯಾಂಗ ರಕ್ಷಣಾ ಸಮಿತಿಯ ಅಖಿಲೇಶ್ ಎ. ಬೆನ್ನುಹುರಿ ಅಪಘಾತದ ಕಾರಣ, ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿ ವಾಸುದೇವ ಉಪಾಧ್ಯಾಯ, ಡಾ. ಅಂಜಲಿ, ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಸೇವಾಭಾರತಿಯ ಕ್ಷೇತ್ರ ಸಂಯೋಜಕ ಶಶಾಂತ್ ಉಪಸ್ಥಿತರಿದ್ದರು.