ಉಡುಪಿ, ಆ. 31: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಭಾರತೀಯ ಜನ ಔಷಧಿ ಕೇಂದ್ರ ಮತ್ತು ಸುವರ್ಣ ಎಂಟರ್ಪ್ರೈಸಸ್ ಇದರ ಆಶ್ರಯದಲ್ಲಿ ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಅಜ್ಜರಕಾಡು ಜನ ಔಷಧಿ ಕೇಂದ್ರದಲ್ಲಿ ಪಂಚ ಪವಿತ್ರ ಗಿಡಗಳ ವಿತರಣಾ ಅಭಿಯಾನ ಕಾರ್ಯಕ್ರಮ ಗುರುವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಂಕರಪುರ ದ್ವಾರಕಾಮಯಿ ಸಾಯಿ ಮುಖ್ಯಪ್ರಾಣ ದೇವಾಲಯದ ಮುಖ್ಯಸ್ಥರಾದ ಸಾಯಿ ಈಶ್ವರ ಗುರೂಜಿ, ನಾರಾಯಣ ಗುರುಗಳು ಸಮಾಜದ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದವರು. ಪ್ರಕೃತಿಗೆ ಹೆಚ್ಚಿನ ಒತ್ತನ್ನು ನೀಡಿದ ಅವರು ಬಹಳಷ್ಟು ಸಾಮಾಜಿಕ ಸುಧಾರಣಾ ಕಾರ್ಯವನ್ನು ಮಾಡಿದರು. ಅವರ ಜಯಂತಿಯನ್ನು ಈ ಮೂಲಕ ಆಚರಣೆ ಮಾಡಿದ್ದು, ಅಭಿನಂದನಾರ್ಹ ಎಂದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಸಜನ್ ಡಾ. ವೀಣಾ ಮಾತನಾಡಿ, ನಾವೆಲ್ಲರೂ ಪ್ರಕೃತಿಗೆ ಗಿಡವನ್ನು ನೆಡುವ ಮೂಲಕ ಕೊಡುಗೆ ನೀಡಬೇಕು ಎಂದರು. ಜಯಂಟ್ಸ್ ಗ್ರೂಪ್ ಅಧ್ಯಕ್ಷರಾದ ವಿವೇಕಾನಂದ ಕಾಮತ್, ಪೂರ್ವ ಅಧ್ಯಕ್ಷರಾದ ಸುಂದರ ಪೂಜಾರಿ ಮೂಡುಕುಕ್ಕುಡೆ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕರಾದ ಮಧುಸೂದನ್ ಹೇರೂರು ಪ್ರಸ್ತಾವಿಕವಾಗಿ ಮಾತನಾಡಿದರು. ವಿವಿಧ ಧಾಮಿ೯ಕ ಸ್ಥಳಗಳಲ್ಲಿ ನೆಡಲು ಧಾರ್ಮಿಕ ಮುಖಂಡರುಗಳಿಗೆ ಪಂಚ ಪವಿತ್ರ ಗಿಡಗಳನ್ನು ವಿತರಿಸಲಾಯಿತು. ಜಯಂಟ್ಸ್ ಪದಾಧಿಕಾರಿಗಳಾದ ಮಿಲ್ಟನ್ ಒಲಿವೇರಾ, ಶ್ರೀನಾಥ್ ಕೋಟ, ರೊನಾಲ್ಡ್ ಡಯಾಸ್, ರವಿರಾಜ್ ಹೆಚ್. ಪಿ., ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.