ಚನ್ನಗಿರಿ, ಆ. 29: ಗ್ರಾಮಠಾಣ ಜಾಗ ಖಾಸಗಿ ವ್ಯಕ್ತಿಗಳ ಕಬಳಿಕೆಗೆ ಸಹಕಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆ ಚನ್ನಗಿರಿ ತಾಲ್ಲೂಕು ಹರೋನಹಳ್ಳಿ ಪಂಚಾಯತಿ ಕಛೇರಿ ಮುಂಭಾಗದಲ್ಲಿ ನಡೆಯಿತು.
ಸ್ಥಳಕ್ಕೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿ ತೆರೆವು ಕಾರ್ಯ ಮಾಡುವವರೆಗೂ ಅನಿರ್ದಿಷ್ಠಾವಧಿ ಧರಣಿ ಮುಂದುವರೆಸುತ್ತೇವೆ. ಅಕ್ರಮ ಖಾತೆ ಮಾಡಿದ್ದು ರದ್ದುಗೊಳಿಸಿ ಒತ್ತುವರಿ ಗ್ರಾಮಠಾಣ ಜಾಗ ತೆರೆವುಗೊಳಿಸಿ ಗ್ರಾಮಠಾಣಾ ಗಡಿ ಗುರುತಿಸಿಕೊಡಬೇಕು ಮತ್ತು ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಿಕೊಡಬೇಕೆಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ ರಾಜ್ಯಾಧ್ಯಕ್ಷರಾದ ಪುನೀತ್ ಕುಮಾರ್ ಆರ್ ಹೇಳಿದ್ದಾರೆ. ರಾಜ್ಯ ಕಾರ್ಯದರ್ಶಿ ರವಿಕುಮಾರ, ಪ್ರಧಾನ ಕಾರ್ಯದರ್ಶಿ ಜಯಂತ, ಸಂಘಟನೆ ಮುಖಂಡರಾದ ಉಮೇಶ, ಬಿನೋದ್, ಗಂಡುಗುಲಿ ಲೇಸಪ್ಪ, ಮರ್ಫಿ, ಮಧುರಾಜ ಮುಂತಾದವರು ಇದ್ದರು.