ಕಡೆಕಾರು, ಆ. 25: ಗ್ರಾಮೀಣ ಹೆರಿಗೆ ಮತ್ತು ಶಿಶು ಕಲ್ಯಾಣ ಕೇಂದ್ರ ಕಡೆಕಾರು, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲದ ವತಿಯಿಂದ ಶುಕ್ರವಾರ ಕಡೆಕಾರು ಆರೋಗ್ಯ ಕೇಂದ್ರದಲ್ಲಿ ಅಂಗಾಂಗ ದಾನದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸ್ನೇಹ ಡಿ. ಮಲ್ಯ ಅವರು ಅಂಗಾಂಗ ದಾನದ ಮಹತ್ವದ ಕುರಿತು ಮಾಹಿತಿ ನೀಡಿ, ಒಬ್ಬರು ಅಂಗಾಂಗ ದಾನ ಮಾಡುವುದರ ಮೂಲಕ ಒಂಭತ್ತು ಜನರ ಜೀವ ಉಳಿಸಬಹುದು. ಹಾಗೆಯೇ ಇನ್ನೂ ಅನೇಕ ಜನರ ಜೀವನ ಗುಣಮಟ್ಟ ಸುಧಾರಿಸಬಹುದೆಂದು ತಿಳಿಸಿದರು.
ಸ್ಥಳೀಯ ನಾಗರಿಕರು ಹಾಗೂ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತೆ ನೀಲಾವತಿ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಸುಲೋಚನ, ಆರತಿ, ಗೀತಾ, ಭಾನು ಹಾಗೂ ಸಮುದಾಯ ವೈದ್ಯಕೀಯ ವಿಭಾಗದ ಸಾಮಾಜಿಕ ಕಾರ್ಯಕರ್ತ ಮಹೇಶ್ ಹಾಗೂ ಸಿಬ್ಬಂದಿ ಶ್ರೀನಾಥ್, ಶ್ರೀಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.