ಉಡುಪಿ, ಆ.19: ಸಮಾಜದ ಪ್ರತಿಯೊಬ್ಬರು ಹಣಕಾಸಿನ ವ್ಯವಹಾರದ ಬಗ್ಗೆ ಅಥವಾ ಹಣ ಬಳಕೆಯ ಮಾಡುವ ವಿಧಗಳ ಬಗ್ಗೆ ಸ್ವತ: ತಿಳುವಳಿಕೆ ಹೊಂದುವುದು ಅತಿ ಅಗತ್ಯವಾದದ್ದು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಬೆಂಗಳೂರು ಪ್ರಾದೇಶಿಕ ಮುಖ್ಯ ಮಹಾ ಪ್ರಬಂಧಕರಾದ ಪಿ.ಎನ್. ರಘನಾಥ ಹೇಳಿದರು. ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ಇಲಾಖೆ, ಬೆಂಗಳೂರು, ಲೀಡ್ ಡಿಸ್ಟ್ರಿಕ್ಟ್ ಆಫೀಸ್, ಕೆನರಾ ಬ್ಯಾಂಕ್, ಉಡುಪಿ ಇದರ ಜಂಟಿಯಾಗಿ ಆಯೋಜಿಸಿದ ಕ್ಷೇತ್ರ ಮಟ್ಟದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡಿದರು.
ಭಾರತೀಯ ರಿಸರ್ವ್ ಬ್ಯಾಂಕಿನ ಬೆಂಗಳೂರು ಪ್ರಾದೇಶಿಕ ಕಛೇರಿಯ ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ಮಹಾ ಪ್ರಬಂಧಕರಾದ ಸುನಂದ ಬಾತ್ರ ಕಾರ್ಯಕ್ರಮ ಉದ್ಘಾಟಿಸಿ. ಮಾತನಾಡಿದರು. ಭಾರತೀಯ ರಿಸರ್ವ್ ಬ್ಯಾಂಕ್ ನ ವತಿಯಿಂದ ಜನ ಸಾಮಾನ್ಯರಿಗೂ ಮತ್ತು ಸ್ವ ಸಹಾಯ ಸಂಘದ ಸದಸ್ಯರು ಹಣಕಾಸಿನ ವ್ಯವಹಾರದಲ್ಲಿ ಸಾಕ್ಷರತೆ ಯನ್ನು ಪಡೆದುಕೊಳ್ಳಬೇಕು ಮತ್ತು ಕೆವೈಸಿ ನೀಡುವಲ್ಲಿ ತೊಂದರೆ ಆದರೆ ಭಾರತೀಯ ರಿಸರ್ವ್ ಬ್ಯಾಂಕಿನ ಗಮನಕ್ಕೆ ತನ್ನಿ ನಾವು ಸಹಾಯ ಮಾಡುತ್ತೇವೆ ಮತ್ತು ಬ್ಯಾಂಕಗಳ ಸೇವೆಯಲ್ಲಿ ತೊಂದರೆ ಆದರೂ ತಿಳಸಬಹುದು. ಮತ್ತು ಆರ್ಥಿಕ ವ್ಯವಹಾರದ ಸರಿಯಾದ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.
ಮಣಿಪಾಲ ಕೆನರಾ ಬ್ಯಾಂಕಿನ ಮಾಹಾ ಪ್ರಬಂಧಕರಾದ ಪಂಡಿತ್ ಎಂ.ಜಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ವಿವರಗಳನ್ನು ಪಡೆಯಿರಿ ಮತ್ತು ಇತರರಿಗೆ ತಿಳಿಸಿ, ಎಲ್ಲ ಬ್ಯಾಂಕ್ ಗಳು ಸಹಕಾರ ಮಾಡುತ್ತವೆ. ಹಾಗೂ ಹಣವನ್ನು ಸಣ್ಣ ಉದ್ಯಮ ಆರಂಭಿಸಲು ಸಹ ಉಪಯೋಗಿಸಿ ಎಂದರು. ಇನ್ನೊಬ್ಬ ಮುಖ್ಯ ಅತಿಥಿಯಾಗಿ ನರ್ಬಾಡ್ ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಸಂಗೀತಾ ಕರ್ತಾ ಮಾತನಾಡಿ, ಸ್ವ ಸಹಾಯ ಸಂಘದ ಸದಸ್ಯರು ಆರ್ಥಿಕ ಸಾಕ್ಷರತೆ ಪಡೆದರೆ ಉತ್ತಮವಾದ ಹಣಕಾಸಿನ ವ್ಯವಹಾರ ನಡೆಸಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿದ್ದ ಉಡುಪಿ ಜಿಲ್ಲಾ ಪಂಚಾಯತ್ ನ ಎನ್ ಆರ್ ಎಲ್ ಎಂ ಯೋಜನಾ ನಿರ್ದೇಶಕರಾದ ನವೀನ ಕುಮಾರ್ ಹೆಚ್. ಡಿ ಮಾತನಾಡಿ ಜಿಲ್ಲೆಯಲ್ಲಿ ಎನ್. ಆರ್. ಎಲ್. ಎಂ. ಮುಖಾಂತರ ಹೆಚ್ಚಿನ ಆರ್ಥಿಕ ಸಾಕ್ಷರತೆ ಕಾರ್ಯ ನಡೆಯುತ್ತಿದೆ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಹಿತಿ ನೀಡಲು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕಿನ ವ್ಯವಸ್ಥಾಪಕರಾದ ತನು ನಂಜಪ್ಪ ಸ್ವಾಗತಿಸಿದರು. ಲೀಡ್ ಬ್ಯಾಂಕಿನ ಎಲ್ ಡಿ ಎಂ ಪಿ.ಎಂ.ಪಿಂಜಾರ್ ವಂದಿಸಿದರು. ಎಲ್ ಆರ್ ಎಲ್ ಎಂ ಜಿಲ್ಲಾ ಸಂಯೋಜಕರಾದ ನವ್ಯ ಸಂಘದಲ್ಲಿ ಆರ್ಥಿಕ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ರಿಸರ್ವ್ ಬ್ಯಾಂಕಿನ ಬೆಂಗಳೂರಿನ ಮ್ಯಾನೇಜರ್ ಅಬ್ದುಲ್ ರಜಾಕ್ ಎನ್ ಅವರು ನೋಟಗಳ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ರಿಸರ್ವ್ ಬ್ಯಾಂಕಿನ ಬೆಂಗಳೂರಿನ ಪ್ರಶಾಂತ ಸಿ.ಬಿ ಅವರು ಡಿಜಿಟಲ್ ಬ್ಯಾಂಕಿನ ವ್ಯವಹಾರ ಮತ್ತು ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಮಾಲತಿ ಎಸ್ ನಾಯ್ಕೆ ಮತ್ತು ವೀಣಾ ಶಾನುಬೋಗ ಅವರು ಸಂಘದ ವತಿಯಿಂದ ನಡೆಸುವ ಸ್ವ ಉದ್ಯೋಗ ಅನುಭವ ಹಂಚಿಕೊಂಡರು.
ಭಾಗವಹಿಸಿದವರ ಜೊತೆ ವಿವಿಧ ಬ್ಯಾಂಕಿನ ಅಧಿಕಾರಿಗಳ ಜೊತೆ ಸಂವಾದ ನಡೆಸಲಾಯಿತು ಕಾರ್ಯಕ್ರಮವನ್ನು ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಮತ್ತು ಎಲ್ ಆರ್ ಎಲ್ ಎಂ ಜಿಲ್ಲಾ ಸಂಯೋಜಕರಾದ ನವ್ಯ ನಿರೂಪಿಸಿದರು. ಉಡುಪಿ ಅಮೂಲ್ಯ ಆರ್ಥಿಕ ಸಾಕ್ಷರತೆಯ ಸಂಯೋಜಕರಾದ ವೀರಾ ಅವರು ಉಪಸ್ಥಿತರಿದ್ದರು. ವಿವಿಧ ತಾಲೂಕಿನ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.