ಬೆಂಗಳೂರು, ಆ. 17: ಮಾಜಿ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ ರವರು ನಡೆಸುತ್ತಿರುವ ಬೃಹತ್ ಸಮಾಜ ಸೇವಾ ಸಂಸ್ಥೆಯಾದ ಆದಮ್ಯ ಚೇತನ ಕಾರ್ಯಾಲಯಕ್ಕೆ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಭೇಟಿ ನೀಡಿದ ಸಂಸ್ಥೆ ನಡೆಸುತ್ತಿರುವ ಬೃಹತ್ ಅನ್ನದಾನ, ದಾಸೋಹ ಕಾರ್ಯವೈಖರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿಯವರು ತಮ್ಮ ಸಿಬ್ಬಂದಿಯವರ ಜೊತೆಗೆ ಶ್ರೀಪಾದರನ್ನು ಸ್ವಾಗತಿಸಿ ಗೌರವಿಸಿದರು. ಶ್ರೀಪಾದರು ಭಗವದ್ಗೀತೆಯ ಸಂದೇಶವನ್ನು ನೀಡಿ, ಜನಸೇವೆಯೇ ಗೀತೆಯ ಪ್ರಮುಖ ಸಂದೇಶ ಎಂಬುದನ್ನು ಅದಮ್ಯ ಚೇತನ ತೋರಿಸಿಕೊಟ್ಟು ಒಂದು ಅಪೂರ್ವ ಆದರ್ಶ ಸಂಸ್ಥೆಯಾಗಿದೆ ಎಂದರು. ಪೂರ್ಣಚಂದ್ರ ಸ್ವಾಗತಿಸಿ, ನಾಗೇಂದ್ರ ವಂದಿಸಿದರು.