ಉಡುಪಿ, ಆ. 16: ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಊರ ಪರಊರ ಭಜನಾ ಮಂಡಳಿಗಳಿಂದ ವಿಶೇಷ ಒಂದು ತಿಂಗಳ ಕಾಲ ಅಹೋರಾತ್ರಿ ಭಜನಾ ಮಹೋತ್ಸವ ನಡೆಯಿತು. ಈ ಪ್ರಯುಕ್ತ ಉಡುಪಿಯಲ್ಲಿ ಪ್ರಥಮ ಬಾರಿಗೆ ಶ್ರೀ ಪಂಡರಾಪುರ ಶೈಲಿಯ ದಿಂಡಿ ಭಜನಾ ಮೆರವಣಿಗೆ ವೈಭವಯುತವಾಗಿ ಮಂಗಳವಾರ ನೆಡೆಯಿತು.
ಶ್ರೀ ದೇವರ ಸನ್ನಿಧಿಯಲ್ಲಿ ಅರ್ಚಕರಾದ ವಿನಾಯಕ ಭಟ್, ದಯಾಘನ್ ಭಟ್ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಮಂಗಳಾರತಿ ಬೆಳಗಿಸಿದರು. ದೇವಳದ ಆಡಳಿತ ಮೊಕ್ತೇಸರರಾದ ಪಿ.ವಿ. ಶೆಣೈ ದೀಪ ಬೆಳಗಿಸಿ ದಿಂಡಿ ಭಜನಾ ಯಾತ್ರೆಗೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳ ಸಹಕಾರದೊಂದಿಗೆ ಮೆರವಣಿಗೆ ದೇವಾಲಯದಿಂದ ಹೊರಟು ಐಡಿಯಲ್ ಸರ್ಕಲ್, ಡಯಾನಾ ಸರ್ಕಲ್, ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್, ಮೂಲಕ ದೇವಾಲಯಕ್ಕೆ ಬಂದು ತಲುಪಿತು.
ಶ್ರೀ ವಿಠೋಭ ರಖುಮಾಯಿ ದೇವರ ಪಲ್ಲಕಿಯೊಂದಿಗೆ ಭಕ್ತರು ಜೈ ವಿಠಲ್ -ಹರಿ ವಿಠಲ್ ನಾಮ ಪಠಿಸುತ್ತಾ ಸಾಗಿದರು. ಕೋಲಾಟ , ವಿವಿಧ ಬಗೆಯ ಸಾಂಪ್ರದಾಯಿಕ ಶೈಲಿಯ ವಸ್ತ್ರ ಧರಿಸಿ ಭಕ್ತರು ಕುಣಿತ ಭಜನೆ ನಡೆಸಿದರು. ವಿವಿಧ ಟ್ಯಾಬ್ಲೋಗಳೊಂದಿಗೆ ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂತು.
ಮಾಜಿ ನಗರಸಭಾ ಸದಸ್ಯ ಶ್ಯಾಮಪ್ರಸಾದ್ ಕುಡ್ವ, ವಿಶ್ವನಾಥ್ ಭಟ್, ಪುಂಡಲೀಕ್ ಕಾಮತ್, ಗಣೇಶ್ ಕಿಣಿ, ಅಶೋಕ್ ಬಾಳಿಗಾ , ರೋಹಿತಾಕ್ಷ ಪಡಿಯಾರ್, ಉಮೇಶ್ ಪೈ, ಮಟ್ಟಾರ್ ವಸಂತ ಕಿಣಿ, ಪ್ರಕಾಶ್ ಶೆಣೈ, ಪ್ರಕಾಶ್ ಭಕ್ತ, ನಾರಾಯಣ ಪ್ರಭು, ಭಜನಾ ಸಮಿತಿಯ ರೂವಾರಿ ಸತೀಶ್ ಕಿಣಿ, ವಿಶಾಲ್ ಶೆಣೈ, ಭಾಸ್ಕರ್ ಶೆಣೈ, ದೀಪಕ್ ಭಟ್, ನಾರಾಯಣ ಭಟ್, ಗಿರೀಶ ಭಟ್, ನರಹರಿ ಪೈ, ವಿಶಾಲ್ ಶೆಣೈ, ನಾಗೇಶ್ ಪೈ, ಯುವಕ ಮಂಡಳಿ ಅಧ್ಯಕ್ಷ ನಿತೇಶ್ ಶೆಣೈ, ಭಜನಾ ಸಪ್ತಾಹ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು, ಶ್ರೀ ಲಕ್ಷ್ಮೀ ವೆಂಕಟೇಶ ಭಗನಿ ವೃಂದ ಹಾಗು ಜಿ.ಎಸ್.ಬಿ ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಹಾಗೂ ವಿವಿಧ ಊರುಗಳಿಂದ ಆಗಮಿಸಿದ ಸಾವಿರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.