ಉಡುಪಿ, ಆ. 11: ಕಾಪು ಶ್ರೀ ಮಹಾದೇವಿ ಪ್ರೌಢಶಾಲೆಯಲ್ಲಿ ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಶಾಲಾ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಭಾರತಿ ಕಾಪು ತಾಲೂಕು ಘಟಕ ಮತ್ತು ಕಾಪು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಬಾಲೋಪಚಾರ ಕೈಪಿಡಿ ವಿತರಿಸಲಾಯಿತು ಮತ್ತು ಔಷಧೀಯ ಸಸ್ಯಗಳನ್ನು ನೆಡಲಾಯಿತು. ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್ ಅವರು ಆರೋಗ್ಯ ಭಾರತಿ ಕಾರ್ಯಸಾಧನೆಗಳನ್ನು ವಿವರಿಸಿದರು. ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಸದಾನಂದ ಭಟ್ ಔಷಧೀಯ ಸಸ್ಯಗಳ ಮಾಹಿತಿ ನೀಡಿದರು. ಕಾಪು ರೋಟರಿ ಅಧ್ಯಕ್ಷರಾದ ರಾಜೇಂದ್ರನಾಥ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀನಿವಾಸ್ ರಾವ್, ಬಾಲಕೃಷ್ಣ ಆಚಾರ್ಯ, ಮಾಧವ ಸಾಲಿಯಾನ್, ಡಾ. ಸದಾನಂದ ಭಟ್, ಸದಾಶಿವ ಭಟ್, ವಿದ್ಯಾಧರ್ ಪುರಾಣಿಕ್, ಕಾರ್ಯದರ್ಶಿ ವೇಣುಕೃಷ್ಣ, ಡಾ. ನಿರಂಜನ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿ ಶಿಕ್ಷಕರಾದ ಗೋಪಾಲ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು ೧೦೦ ವಿದ್ಯಾರ್ಥಿಗಳು , ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.