ಉಳ್ಳಾಲ, ಆ.11: ಯುವಕ ಮಂಡಲ(ರಿ.)ಇರಾ ಇದರ ಸುವರ್ಣ ಮಹೋತ್ಸವದ ಅಂಗವಾಗಿ ವನಮಹೋತ್ಸವ ಹಾಗು ಆಟಿದಕೂಟ ಇರಾ ಬಂಟರ ಭವನದಲ್ಲಿ ನಡೆಯಿತು. ವನಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರ ಮಾರ್ಗದರ್ಶನದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಯರಾಮ್ ಪೂಜಾರಿ ಹಾಗು ಗಣೇಶ್ ಕೊಟ್ಟಾರಿ ಗಿಡ ನಡುವ ಮೂಲಕ ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಯುವಕ ಮಂಡಲ ಸುವರ್ಣ ಮಹೋತ್ಸವದ ಗೌರವಾಧ್ಯಕ್ಷರಾದ ಪಿ. ಎಂ. ಕೊಡಂಗೆ, ಪ್ರಧಾನ ಸಂಚಾಲಕರಾದ ಜಗದೀಶ್ ಶೆಟ್ಟಿ ಇರಾಗುತ್ತು ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು.
ಪುಷ್ಪರಾಜ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ನಂತರ ಆಟಿದಕೂಟ ಕಾರ್ಯಕ್ರಮ ಉಧ್ಘಾಟಿಸಿದ ಸೈಂಟ್ ಆಗ್ನೆಸ್ ಕಾಲೀಜಿನ ಪ್ರಾಧ್ಯಾಪಕರೂ, ಪ್ರಖರ ವಾಗ್ಮಿಯೂ ಆದ ಡಾ. ಅರುಣ್ ಉಳ್ಳಾಲ್, ಇರಾ ಯುವಕ ಮಂಡಲದ ಕಾರ್ಯಕ್ರಮವನ್ನು ಶ್ಲಾಘಿಸಿ ತುಳು ಸಂಸ್ಕೃತಿಯ ಪರಿಚಯ ನೀಡಿ ಆಟಿದ ಕೂಟದ ಹಿನ್ನೆಲೆ ಹಾಗು ಮಹತ್ವದ ಬಗ್ಗೆ ವಿಸ್ತ್ರತವಾಗಿ ಬೆಳಕು ಚೆಲ್ಲಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಟೀಲು ಮೇಳದ ಸಂಚಾಲಕರೂ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರೂ ಆದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಪಿ ಎಂ ಕೊಡಂಗೆ, ಪ್ರಧಾನ ಸಂಚಾಲಕರಾದ ಜಗದೀಶ್ ಶೆಟ್ಟಿ ಇರಾಗುತ್ತು, ಅಧ್ಯಕ್ಷರಾದ ಜಯರಾಮ್ ಪೂಜಾರಿ ಸೂತ್ರಬೈಲು, ಕಾರ್ಯದರ್ಶಿಗಳಾದ ಸುರೇಶ್ ರೈ ಪರ್ಲಡ್ಕ, ಯುವಕ ಮಂಡಲದ ಅಧ್ಯಕ್ಷರಾದ ಗಣೇಶ್ ಎಸ್ ಅತ್ತಾವರ, ಕಾರ್ಯದರ್ಶಿಗಳಾದ ಜಯರಾಜ್ ಶೆಟ್ಟಿ ಕುಂಡಾವು ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯರಾದ ಸುರೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ ಕುಕ್ಕಾಜೆ ಸ್ವಾಗತಿಸಿ, ವೈ ಬಿ ಸುಂದರ್, ಯತಿರಾಜ್ ಶೆಟ್ಟಿ ಸಂಪಿಲ ವಂದಿಸಿದರು.