Monday, November 25, 2024
Monday, November 25, 2024

ಕಾಡೂರು-ನಡೂರು ಗ್ರಾಮ ಪಂಚಾಯತ್: ತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಗೂ ಬಂತು ಕ್ಯೂ.ಆರ್. ಕೋಡ್

ಕಾಡೂರು-ನಡೂರು ಗ್ರಾಮ ಪಂಚಾಯತ್: ತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಗೂ ಬಂತು ಕ್ಯೂ.ಆರ್. ಕೋಡ್

Date:

ಉಡುಪಿ, ಆ. 6: ಡಿಜಿಟಲೀಕರಣ ಪ್ರಭಾವದಿಂದ ಎಲ್ಲಾ ವಸ್ತು ಮತ್ತು ಸೇವೆಗಳು ಆನ್ ಲೈನ್ ಮೂಲಕ ಮನೆ ಬಾಗಿಲಿಗೆ ಬರುತ್ತಿದ್ದು, ವಿದ್ಯುತ್, ಗ್ಯಾಸ್, ಕೇಬಲ್ ಶುಲ್ಕ , ಬಸ್. ರೈಲು. ವಿಮಾನ ಬುಕ್ಕಿಂಗ್ ಸೇರಿದಂತೆ ದೈನಂದಿನ ಹಲವು ವಹಿವಾಟುಗಳನ್ನು ನಗದುರಹಿತವಾಗಿ ಮನೆಯಿಂದಲೇ ನಿರ್ವಹಿಸಬಹುದಾಗಿದ್ದು, ಈಗ ಮನೆ ಮನೆಯಿಂದ ಕಸ ಸಂಗ್ರಹ ಶುಲ್ಕವನ್ನೂ ಸಹ ಕ್ಯೂಆರ್ ಕೋಡ್ ಮೂಲಕ ಪಾವತಿಸುವ ವಿನೂತನ ಸೌಲಭ್ಯವನ್ನು ಪರಿಚಯಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಡೂರು-ನಡೂರು ಗ್ರಾಮ ಪಂಚಾಯತ್ ನಲ್ಲಿ ತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಯನ್ನು ಮನೆಯಲ್ಲೆ ಕುಳಿತು ನಗದು ರಹಿತವಾಗಿ ಪಾವತಿ ಮಾಡುವ ವ್ಯವಸ್ಥೆಯನ್ನು ತಮ್ಮ ಗ್ರಾಮಸ್ಥರಿಗೆ ಪರಿಚಯಿಸಿದೆ.

ತ್ಯಾಜ್ಯವೆಲ್ಲಾ ಸಂಪನ್ಮೂಲ ಎಂಬ ಪರಿಕಲ್ಪನೆಯೊಂದಿಗೆ ಕಾಡೂರು -ನಡೂರಿನಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೊಂಡು 5 ವರ್ಷಗಳಾಗಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ಪ್ರತಿದಿನ ಸಂಗ್ರಹಿಸುವ ಘನ ಸಂಪನ್ಮೂಲ ನಿರ್ವಹಣಾ ಘಟಕದ ಶುಲ್ಕವನ್ನು ಪಾವತಿಸಲು ಕ್ಯೂ ಆರ್ ಕೋಡ್ ಮತ್ತು ಸ್ಕಾನರ್ ಅಳವಡಿಸಿ, ನಗದುರಹಿತ ಶುಲ್ಕ ಪಾವತಿಯು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಕಾಡೂರು-ನಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳು ಒಂದಕ್ಕೊಂದು ಬಹಳ ದೂರದಲ್ಲಿದ್ದು, ಪ್ರತಿದಿನ ಕಸ ಸಂಗ್ರಹ ವ್ಯವಸ್ಥೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಆದರೆ ಕಸ ಸಂಗ್ರಹಣೆಯ ಶುಲ್ಕ ಪಾವತಿ ಸಮಯದಲ್ಲಿ ಮನೆಗಳಿಗೆ ಭೇಟಿ ನೀಡಲು ತುಂಬಾ ಕಷ್ಟಕರವಾಗಿದ್ದು, ಅಲ್ಲದೇ ಶುಲ್ಕ ಸಂಗ್ರಹಣೆಗೆ ತೆರಳಿದ ದಿನ , ಇವತ್ತು ಹಣ ಇಲ್ಲ, ನಾಳೆ ಅಥವಾ ಮತ್ತೊಮ್ಮೆ ಬನ್ನಿ ಎಂದರೆ ಪುನ: ಆ ಮನೆಗಳಿಗೆ ಸಕಾಲದಲ್ಲಿ ತೆರಳುವುದು ಸಾದ್ಯವಾಗುತ್ತಿರಲಿಲ್ಲ ಅಲ್ಲದೇ ಶುಲ್ಕ ಸಂಗ್ರಹಣೆಯ ಸಿಬ್ಬಂದಿಗಳ ಕೊರತೆ ಸಹ ಇತ್ತು.

ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಆಲೋಚನೆಯಲ್ಲಿ ಕ್ಯೂ ಆರ್ ಕೋಡ್ ಮತ್ತು ಸ್ಕಾನರ್ ವ್ಯವಸ್ಥೆ ಮೂಲಕ ಶುಲ್ಕ ಪಾವತಿ ಮಾಡುವ ಕುರಿತಂತೆ ಪಂಚಾಯತ್ ನ ಎಲ್ಲ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು, ಗ್ರಾಮಸ್ಥರ ಮನ ಒಲಿಸಿದ ಪರಿಣಾಮ ಈ ಯೋಜನೆ ಯಶಸ್ವಿಯಾಗಿ ಜಾರಿಗೊಂಡು, ನಗದು ರಹಿತ ಶುಲ್ಕ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತ್ ನ ಎಲ್ಲಾ ವಾರ್ಡ್ವಾರು ಎಲ್ಲಾ ಮನೆಗಳ ಮೊಬೈಲ್ ಸಂಖ್ಯೆಗಳ ವಾಟ್ಸಪ್ ಗ್ರೂಫ್ ರಚಿಸಲಾಗಿದ್ದು, ಸಂಬಂಧಿಸಿದ ವಾರ್ಡ್ ಸದಸ್ಯರು ಸಹ ಇದರಲ್ಲಿ ನೊಂದಣಿಯಾಗಿದ್ದು,ಮೇಲ್ವಿಚಾರಣೆಯ ನಡೆಸುವುದು ವಿಶೇಷವಾಗಿದೆ. ಪ್ರತೀ ತಿಂಗಳ ಶುಲ್ಕದ ವಿವರಗಳನ್ನು ಕ್ಯೂ ಆರ್ ಕೋಡ್ ಮತ್ತು ಸ್ಕ್ಯಾನರ್ ಮೂಲಕ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಲಾಗುತ್ತಿದ್ದು, ಗ್ರಾಮಸ್ಥರೂ ಸಹ ಈ ವ್ಯವಸ್ಥೆಗೆ ಉತ್ತಮ ಸ್ಪಂದನೆ ತೋರಿದ್ದಾರೆ.ಗ್ರಾಮದ ಹಲವು ಮನೆಗಳಲ್ಲಿ ದುಡಿಯುವ ವ್ಯಕ್ತಿ ಬೇರೆ ಊರಿನಲ್ಲಿ ಇದ್ದು ಅವರು ಅಲ್ಲಿಂದಲೇ ತಮ್ಮ ಮನೆಯ ಶುಲ್ಕವನ್ನು ಪಾವತಿ ಮಾಡುತ್ತಿದ್ದು, ಗ್ರಾಮ ಪಂಚಾಯತ್ ನ ಈ ವಿನೂತನ ವ್ಯವಸ್ಥೆಗೆ ಬೆಂಬಲ ಸೂಚಿಸಿದ್ದಾರೆ.

ಕಾಡೂರು ಮತ್ತು ನಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5000 ಜನಸಂಖ್ಯೆಯಿದ್ದು, 1106 ಕುಟುಂಬಗಳು, 36 ಅಂಗಡಿ/ವಾಣಿಜ್ಯ ಸಂಕೀರ್ಣ ಗಳಿದ್ದು ಪ್ರತೀ ತಿಂಗಳು 12 ರಿಂದ 16 ಟನ್ ಒಣ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ. ಗ್ರಾಮ ಪಂಚಾಯತ್ ನ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು , ಪಂಚಾಯತ್ ಅಭಿವೃದ್ದಿ ಅಧಿಕಾರಿ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮಗಳಗೆ ಆದ್ಯತೆ ನೀಡಿದ್ದಾರೆ. ಗ್ರಾಮಸ್ಥರಿಗೆ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವಲ್ಲಿ ತ್ಯಾಜ್ಯ ನಿರ್ವಹಣಾ ಘಟಕದ ಮೇಲ್ವಿಚಾರಕರ ಪಾತ್ರವೂ ಸಹ ಮಹತ್ವದ್ದಾಗಿದೆ. ಗ್ರಾಮ ಪಂಚಾಯತ್ ನಲ್ಲಿ ದೊರೆಯುವ ಮಾಸಿಕ ಸಂಭಾವನೆಯನ್ನು ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹಸ್ತಾಂತರಿಸುವ ಸದಸ್ಯರಿರುವುದು ಈ ಗ್ರಾಮಗಳ ಸ್ವಚ್ಛತಾ ಜಾಗೃತಿಗೆ ಸಾಕ್ಷಿಯಾಗಿದೆ. ಈಗಾಗಲೇ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿ ಜಿಲ್ಲೆಯಲ್ಲಿ ಮಾದರಿ ಗ್ರಾಮ ಪಂಚಾಯತ್ ಆಗಿ ಗುರುತಿಸಿಕೊಂಡಿರುವ ಈ ಪಂಚಾಯತ್ ಹಲವು ಜಿಲ್ಲೆಗಳ ವಿಷಯಾಸಕ್ತ ಅಧಿಕಾರಿಗಳಿಗೆ ಅಧ್ಯಯನ ಕೇಂದ್ರವಾಗಿಯೂ ರೂಪುಗೊಂಡಿದೆ.

“ಪಂಚಾಯತ್ ವ್ಯಾಪ್ತಿಯಲ್ಲಿ ಜಲಜಾಗೃತಿ ಹಾಗೂ ಸ್ವಚ್ಛತಾ ಜಾಗೃತಿಗೆ ಪಂಚಾಯತ್ ನ ಎಲ್ಲಾ ಜನಪ್ರತಿನಿಧಿಗಳು ಆದ್ಯತೆ ನೀಡಿದ್ದೇವೆ. ಗ್ರಾಮದ ಸ್ವಾವಲಂಬಿ ಮತ್ತು ಸರ್ವತೋಮುಖ ಅಭಿವೃಧ್ದಿಗೆ ಇನ್ನಷ್ಟು ಹೊಸ ಪ್ರಯತ್ನಗಳಿಗೆ ಸಿದ್ದತೆ ನಡೆಸಿದ್ದೇವೆ.” ಪಾಂಡುರಂಗ ಶೆಟ್ಟಿ, ಅಧ್ಯಕ್ಷರು.ಕಾಡೂರು-ನಡೂರು ಗ್ರಾಮ ಪಂಚಾಯತ್.

“ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಶುಲ್ಕ ಸಂಗ್ರಹವನ್ನು ವ್ಯವಸ್ಥಿತವಾಗಿ ಜರುಗಿಸುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾಡೂರು-ನಡೂರು ಗ್ರಾಮ ಪಂಚಾಯತ್ ಕೈಗೊಂಡಿರುವ ವಿನೂತನ ಪ್ರಯತ್ನ ಮಾದರಿಯಾದುದು. ಇದರಿಂದ ಪಾರದರ್ಶಕ ನಿರ್ವಹಣೆಯ ಜೊತೆಗೆ ನಾಗರೀಕರಿಗೆ ಪಾವತಿಗೂ ಅನುಕೂಲವಾಗಲಿದೆ”. – ಪ್ರಸನ್ನ ಹೆಚ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!