ಉಡುಪಿ, ಆ.5: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಆಗಸ್ಟ್ 8 ಮತ್ತು 9 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. ಲೈನ್ ಶಿಫ್ಟಿಂಗ್ ಹಾಗೂ 110 ಕೆವಿ ಕಾರ್ಕಳ ವಿದ್ಯುತ್ ಕೇಂದ್ರದಲ್ಲಿ ಫೀಡರ್ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬಂಡಿಮಠ, ದುರ್ಗಾ, ಬೈಲೂರ್ ಎಕ್ಸ್ಪ್ರೆಸ್, ಮುಂಡ್ಲಿ, ಜಾರ್ಕಳ, ಕೆ.ಹೆಚ್.ಬಿ, ನಕ್ರೆ ಮತ್ತು ಪದವು ಫೀಡರ್ಗಳಲ್ಲಿ ಬಂಡೀಮಠ, ಪೆರ್ವಾಜೆ, ಪತ್ತೊಂಜಿಕಟ್ಟೆ, ಜೋಡುರಸ್ತೆ, ಮುಂಡ್ಲಿ, ತೆಳ್ಳಾರು, ಪಲಾಯಿಪಕ್ಯಾರು, ಕಜೆ, ಪೊಲ್ಲಾರು, ಕುಕ್ಕುಂದೂರು, ಅಯ್ಯಪ್ಪನಗರ, ಪಿಲಿಚಂಡಿ ಸ್ಥಾನ, ಗಣಿತನಗರ, ಜಾರ್ಕಳ, ದುರ್ಗಾ, ಮಲೆಬೆಟ್ಟು, ಕಡಂಬಳ, ಬೈಲೂರು, ನೀರೆ, ಕೌಡೂರು, ಕೆ.ಹೆಚ್.ಬಿ. ಕಾಲೋನಿ, ಪರಪು, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 8 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/11 ಕೆ.ವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಫೀಡರ್ಗಳಾದ ಮುಂಡ್ಕೂರು, ನಂದಳಿಕೆ ಮತ್ತು ಬೆಳ್ಮಣ್, ಕ್ರಷರ್ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳ್ಮಣ್, ಬೆಳ್ಮಣ್ ದೇವಸ್ಥಾನ, ಗೋಳಿಕಟ್ಟೆ, ಜಂತ್ರ, ನೀಚಾಲು, ನಂದಳಿಕೆ, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್ ತಾರ್, ಜಾರಿಗೆಕಟ್ಟೆ, ಸೂಡ ದೇವಸ್ಥಾನ, ಸೂಡ, ಮಕ್ಕೇರಿ ಬೈಲು, ಕೊರಜೆ, ಸೂಡ ಗರಡಿ, ಪಡುಬೆಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 8 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 110/33/11 ಕೆ.ವಿ ನಿಟ್ಟೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬನ್ನಂಜೆ ಫೀಡರಿನಲ್ಲಿ ಹಾಗೂ ಉದ್ಯಾವರ ಎಂ.ಯು.ಎಸ್.ಎಸ್ ನಿಂದ ಹೊರಡುವ ಮೇಲ್ಪೇಟೆ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಜ್ಜರಕಾಡು, ಎಲ್.ಐ.ಸಿ, ಜೋಡುಕಟ್ಟೆ, ಟಿ.ಎಂ.ಎ ಪೈ ಆಸ್ಪತ್ರೆ, ಖಜಾನೆ, ತಾಲೂಕು ಪಂಚಾಯತ್, ಮಠದಂಗಡಿ, ಅಂಕುದ್ರು, ಬೋಳಾರ್ ಗುಡ್ಡೆ, ಮೇಲ್ಪೇಟೆ, ಕೊರಂಗ್ರಪಾಡಿ, ಬೊಳ್ಜೆ, ಕೇದಾರ್, ಕೆಮ್ತೂರು, ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 8 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/11ಕೆವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಹೊನ್ನಾಳ, ಕೊಳಲಗಿರಿ, ಚೇರ್ಕಾಡಿ, ಕೊಕ್ಕರ್ಣೆ ಫೀಡರ್ ಮಾರ್ಗದಲ್ಲಿ ಹಾಗೂ 110/11 ಕೆ.ವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಕಲ್ಯಾಣಪುರ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆದರ್ಶನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ, ಉಗ್ಗೇಲ್ ಬೆಟ್ಟು, ಜಾತಬೆಟ್ಟು, ಹಾವಂಜೆ, ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಪಡುನೀಲಾವರ, ಎಳ್ಳಂಪಳ್ಳಿ, ತಡೆಕಲ್ಲು, ಪ್ರಗತಿನಗರ, ಜಾರ್ಜೆಢ್ಡು, ಗಣೇಶ್ ಕಲಾಮಂದಿರ, ಕೆ.ಕೆ.ಪಾರ್ಮ್ಸ್, ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 8 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಕೆ.ಎಂ.ಎಫ್ ಭಂಡಾರಿ ಪವರ್ ಲೈನ್, ಇಂದ್ರಾಳಿ, ಉದ್ಯಾವರ-2 ಫೀಡರಿನಲ್ಲಿ ಹಾಗೂ 33/11 ಕೆ.ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಉದ್ಯಾವರ-1 ಮತ್ತು ಚಿಟ್ಪಾಡಿ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಈಶ್ವರನಗರ, ಸರಳೆಬೆಟ್ಟು, ಗಣೇಶ್ ಭಾಗ್, ಇಂಡಸ್ಟ್ರಿಯಲ್ ಏರಿಯಾ, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಉದ್ಯಾವರ, ಕಟಪಾಡಿ,, ಉಡುಪಿ ಅಮ್ಮಣ್ಣಿ ರಾಮಣ್ಣ ಹಾಲ್, ಇಂದಿರಾನಗರ, ಕಸ್ತೂರ್ಬಾನಗರ, ಪದ್ಮನಾಭನಗರ, ಚಿಟ್ಪಾಡಿ, ಹನುಮಾನ್ ಗ್ಯಾರೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 8 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
33/11 ಕೆ.ವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಶಿವಪುರ, ಚಾರ, ಮುದ್ರಾಡಿ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಚಾರ, ಹೊಸೂರು, ಶಿವಪುರ, ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಕನ್ಯಾನ, ಸರ್ಕಾರಿ ಆಸ್ಪತ್ರೆ ಬಳಿ, ಮುದ್ರಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ. 9 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.