ಬೆಳ್ಮಣ್, ಜು. 23: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಜೇಸಿಐ ಬೆಳ್ಮಣ್ಣು ಮತ್ತು ಯುವ ಜೇಸಿ ವಿಭಾಗದ ನೇತೃತ್ವದಲ್ಲಿ ಕುಡುಂದೂರಿನ ಬೆರಣಗುಡ್ಡೆಯ ಗದ್ದೆಯಲ್ಲಿ ಕೆಸರ್‌ಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಕಾಯಕ್ರಮದಲ್ಲಿ ಹಗ್ಗಜಗ್ಗಾಟ, ನಿಧಿಶೋಧ, ಉಪ್ಪು ಮುಡಿ ಓಟ, ೧೦೦ಮೀ. ಓಟ, ಹಾಳೆ ಎಳೆಯುವ ಸ್ಪರ್ಧೆ, ಮಡಿಕೆ ಹೊಡೆಯುವ ಸ್ಪರ್ಧೆ ಜರಗಿತು. ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಪೂರ್ವಾಧ್ಯಕ್ಷರು, ಯುವ ಕೃಷಿಕರಾದ ರಾಜೇಶ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಕುಡುಂದೂರಿನ ಬೆರಣಗುಡ್ಡೆಯ ಗದ್ದೆಯಲ್ಲಿ ಕೆಸರ್‌ಡೊಂಜಿ ದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರಗಿತು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟ ಗ್ರಾಮೀಣ ಜನರಿಗೆ ತನ್ನನ್ನು ತಾನು ತೊಡಗಿಸಿಕೊಳ್ಳಲು ಉತ್ತಮ ಅವಕಾಶ ಎಂದರು.
ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ, ಯಾವುದೇ ಒಂದು ಸಂಘಟನೆ ಬಲಪಡಿಸಲು ಈ ರೀತಿಯ ಕ್ರೀಡಾಕೂಟ ಅತೀ ಅಗತ್ಯ, ಇಂತಹ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಯುವ ಸಮುದಾಯವನ್ನು ಒಟ್ಟುಗೂಡಿಸಲು ಸಾಧ್ಯವೆಂದರು. ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಜೇಸಿಯ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಬೆಳ್ಮಣ್ಣು ಯುವ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ, ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಕಾರ್ಯದರ್ಶಿ ಲಲಿತಾ ಆಚಾರ್ಯ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಸಂಘದ ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸ್ರಬೈಲು, ರಾಜೇಶ್ ಕೋಟ್ಯಾನ್, ಉದಯ ಅಂಚನ್, ಸದಸ್ಯರಾದ ಮಂಜುನಾಥ ಆಚಾರ್ಯ, ಸುರೇಶ್ ಅಬ್ಬನಡ್ಕ, ವೀಣಾ ಪೂಜಾರಿ, ಆರತಿ ಕುಮಾರಿ, ಹರೀಶ್ ಪೂಜಾರಿ, ಪುಷ್ಪ ಕುಲಾಲ್, ಸಂಧ್ಯಾ ಶೆಟ್ಟಿ, ಸುಲೋಚನಾ ಕೋಟ್ಯಾನ್, ಶಾಂತರಾಮ್ ಕುಲಾಲ್ ಮೊದಲಾದವರಿದ್ದರು.