ಉಡುಪಿ, ಜು. 20: ರೋಟರಿ ಜಿಲ್ಲೆ 3182, ವಲಯ 4ರ ಪ್ರತಿಷ್ಠಿತ ರೋಟರಾಕ್ಟ್ ಕ್ಲಬ್ ಉಡುಪಿ ಇದರ 2023-24ನೇ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಿತು.
ಪದ ಪ್ರಧಾನ ಅಧಿಕಾರಿ, ರೋಟರಿ ಉಡುಪಿಯ ಅಧ್ಯಕ್ಷೆ ದೀಪಾ ಭಂಡಾರಿಯವರು ನೂತನ ಅಧ್ಯಕ್ಷೆ ತನ್ವಿ ವಿಶಿಷ್ಠ ಅವರಿಗೆ ಹಾಗೂ ಕಾರ್ಯದರ್ಶಿ ಅಂಶ್ ಕೋಟ್ಯಾನ್ ಅವರಿಗೆ ಪದಪ್ರಧಾನ ಮಾಡಿ, ಪ್ರಮಾಣ ವಚನ ಬೋಧಿಸಿದರು.
ಮುಖ್ಯ ಅತಿಥಿಗಳಾದ ರೋಟರಾಕ್ಟ್ ಜಿಲ್ಲಾ ಚೇರ್ಮನ್ ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್. ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿದಸಿದರು ಹಾಗೂ ಇನ್ನೋರ್ವ ಮುಖ್ಯ ಅತಿಥಿ, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಶ್ರುತಿ ಶೆಣೈ ಅವರು ರೋಟರಾಕ್ಟ್ ಕ್ಲಬ್ ಉಡುಪಿಯು ಜಿಲ್ಲಾ ಕಾರ್ಯಕ್ರಮಗಳ ಅಂಗವಾಗಿ ಸಗ್ರಿ ನೋಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವಿವಿಧ ಯೋಜನೆಗಳಿಗಾಗಿ ದತ್ತು ಸ್ವೀಕರಿಸುವ ಪ್ರಕ್ರಿಯೆಯನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಘೋಷಣಾ ಪತ್ರವನ್ನು ಹಸ್ತಾಂತರಿಸುವ ಮೂಲಕ ಹಾಗೂ ಶಾಲೆಯ ಉಪಯೋಗಕ್ಕಾಗಿ 20 ಕುರ್ಚಿಗಳನ್ನು ಸಾಂಕೇತಿಕವಾಗಿ ನೀಡುವ ಮೂಲಕ ಚಾಲನೆಗೈದರು.
ಗೌರವಾನ್ವಿತ ಅತಿಥಿಗಳಾಗಿ ರೋಟರಿ ಉಡುಪಿಯ ಯುವಜನ ಸೇವಾ ನಿರ್ದೇಶಕ ಹೇಮಂತ್ ಯು. ಕಾಂತ್, ರೋಟರಾಕ್ಟ್ ಚೇರ್ಮನ್ – ಪದ್ಮಿನಿ ಭಟ್ ಮತ್ತು ರೋಟರಾಕ್ಟ್ ವಲಯ ಪ್ರತಿನಿಧಿ ಅಶ್ವಿಜಾ ಕೆದ್ಲಾಯ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿಗೆ ಮುಂದಿನ ಪದವಿಪೂರ್ವ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡಲಾಯಿತು ಮತ್ತು ಅರ್ಹ ಹೈಸ್ಕೂಲ್ ವಿದ್ಯಾರ್ಥಿಯೊಬ್ಬನಿಗೆ ಶಾಲೆಗೆ ಹೋಗಿ ಬರಲು ಬೈಸಿಕಲ್ ವಿತರಿಸಲಾಯಿತು.
ರೋಟರಿ ಜಿಲ್ಲಾ ಕಾರ್ಯಕ್ರಮಗಳ ಅಂಗವಾಗಿ ಸುರಕ್ಷಿತ ವಾಹನ ಚಾಲನೆಯ ಸಂದೇಶವುಳ್ಳ ಕಾರ್ ಸ್ಟಿಕ್ಕರ್ ಬಿಡುಗಡೆಗೊಳಿಸಲಾಯಿತು.
ನಿರ್ಗಮನ ಅಧ್ಯಕ್ಷ ಶ್ರೀಹರಿ ಕೆ. ಎಸ್. ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಸಂಭ್ರಮ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಅಂಶ್ ಕೋಟ್ಯಾನ್ ವಂದಿಸಿದರು. ನಿಖಿತಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ರೋಟರಿ ಹಾಗೂ ರೋಟರಾಕ್ಟ್ ಕ್ಲಬ್ ಗಳ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.