ಉಡುಪಿ, ಜು.16: ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಮಳಿಗೆಯಲ್ಲಿ ಮೈನ್ ವಜ್ರಾಭರಣದ ನವೀನ ಸಂಗ್ರಹ ವಾದ ‘ಸ್ಪಾರ್ಕಲ್ ಆಫ್ ಹೆವೆನ್’ ಸಂಗ್ರಹವನ್ನು ಅನಾವರಣಗೊಳಿಸಲಾಯಿತು. ಕಲರ್ಸ್ ಕನ್ನಡದ ಮಜಾ ಭಾರತ ಖ್ಯಾತಿಯ ಆರಾಧನ ಭಟ್, ಸರಹ ಫೆರ್ನಾಂಡೀಸ್, ಹಂಸಿಕ ರವರು ಅನಾವರಣಗೊಳಿಸಿದರು.
ಸಿಬ್ಬಂದಿ ಸುಮಿತ್ ಮಾತನಾಡಿ, ಆಧುನಿಕ ಮಹಿಳೆಗಾಗಿ ತಯಾರಿಸಿದ ಅದ್ಭುತ ಸಂಗ್ರಹವು ಸಂಕೀರ್ಣ ವಜ್ರಗಳ ಸಾಮರಸ್ಯದ ಸಂಯೋಜನೆಯನ್ನು ಪ್ರದರ್ಶಿಸುತ್ತದೆ. ವಿವಿಧ ಆಕಾರಗಳ ವಿಶಿಷ್ಟ ವಜ್ರಗಳನ್ನು ಸಂಯೋಜಿತ ವಿನ್ಯಾಸದಲ್ಲಿ ಕೌಶಲದಿಂದ ಸಮಯೋಜಿಸಿದ ಆಭರಣಗಳು ಸಂಗ್ರಹದಲ್ಲಿದ್ದು ಸಾಲಿಟೇರ್ ದೊಡ್ಡದಾಗಿ ಮತ್ತು ಆಕರ್ಷವಾಗಿ ಕಾಣುವಂತೆ ಮಾಡುತ್ತದೆ. ಈ ಸಂಗ್ರಹದಲ್ಲಿರುವ ಪ್ರತಿಯೊಂದು ಆಭರಣವು ಸ್ವರ್ಗೀಯ ಆಕರ್ಷಯಣೆಯಾಗಿದೆ ಮತ್ತು ಧರಿಸುವ ಪ್ರತಿ ಮಹಿಳೆಯ ಸೊಬಗನ್ನು ಹೆಚ್ಚಿಸುತ್ತದೆ.
ಕೇವಲ ರೂ 30,000 ದಿಂದ ಆರಂಭವಾಗುವ ಬೆಲೆಗಳಲ್ಲಿ ಈ ಅಸಾಧಾರಣ ಆಭರಣಗಳು ಲಭ್ಯವಿದೆ ಎಂದರು. 28 ಹಂತದ ಗುಣಮಟ್ಟ ಪರೀಕ್ಷಿಸಿದ ಐಜಿಐ ಪ್ರಮಾಣೀಕೃತ 100% ವಿನಿಮಯ ಮೌಲ್ಯ ಹಾಗೂ ಬೈಬಾಕ್ ಗ್ಯಾರಂಟಿ, ಜೀವನ ಪರ್ಯಂತ ಉಚಿತ ನಿರ್ವಹಣೆ ಹಾಗೂ ಉಚಿತ ವಿಮೆಯಂತಹ ಸೌಲಭ್ಯವನ್ನು ಒದಗಿಸಲಾಗಿದೆ.
ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಮಾತನಾಡಿ, ನಮ್ಮ ಗೌರವಾನ್ವಿತ ಗ್ರಾಹಕರಿಗೆ ‘ಸ್ಪಾರ್ಕಲ್ ಆಫ್ ಹೆವೆನ್’ ಸಂಗ್ರಹವನ್ನು ಪರಿಚಹಿಸಲು ನಾವು ರೋಮಂಚನಗೊಂಡಿದ್ದೇವೆ. ಗುಣಮಟ್ಟದಲ್ಲಿ ರಾಜಿ ಇಲ್ಲದೆ ವಜ್ರಾಭರಣಗಳು ಕಡಿಮೆ ಬೆಲೆಗೆ ಒದಗಿಸಿ ಗ್ರಾಹಕರ ವಿಶ್ವಾಸವನ್ನು ಗೆಲ್ಲುತ್ತಿದೆ. ವಿಶ್ವಾದ್ಯಂತ ಆಭರಣದಲ್ಲಿ ಆಸಕ್ತರಾಗಿರುವವರ ಆಸೆಗಳನ್ನು ಪೂರೈಸುತ್ತದೆ ಎಂದರು.
ಕ್ರಾಯಕ್ರಮದಲ್ಲಿ ಗ್ರಾಹಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಘ್ನೇಶ್ ಕ್ರಾಯಕ್ರಮ ನಿರೂಪಿಸಿ ವಂದಿಸಿದರು.