ಉಡುಪಿ, ಜುಲೈ 15: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜುಲೈ 18 ಮತ್ತು 19 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
33/11 ಕೆ.ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಉಡುಪಿ-2 ಫೀಡರ್ ಮಾರ್ಗದಲ್ಲಿ ಹಾಗೂ 110/33/11 ಕೆ.ವಿ ನಿಟ್ಟೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕುಡ್ಸೆಂಪು ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಉಡುಪಿ ನಗರ ಪ್ರದೇಶಗಳಾದ ಜೋಡುಕಟ್ಟೆ, ಟಿ.ಎಂ.ಎ ಪೈ ಆಸ್ಪತ್ರೆ, ಮಿಷನ್ ಕಂಪೌಂಡ್ 2ನೇ ಮುಖ್ಯ ರಸ್ತೆ, ಖಜಾನೆ, ಆದಿಉಡುಪಿ, ಪಂದುಬೆಟ್ಟು, ಕಲ್ಮಾಡಿ, ಮಲ್ಪೆ ಪೇಟೆ, ಮಲ್ಪೆ ಬಂದರು, ಕೊಪ್ಪಲತೋಟ, ಬಾಪು ತೋಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 18 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಾರಾಹಿ ವಿದ್ಯುದಾಗಾರದಲ್ಲಿ ಬ್ಲ್ಯಾಕ್ ಸ್ಟಾರ್ಟ್ ಪ್ರೊಸೀಜರ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 110 ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್, 33 ಕೆ.ವಿ ಪರ್ಕಳ, 33 ಕೆ.ವಿ ಮಾಹೆ ಮತ್ತು 110 ಕೆ.ವಿ ಮಧುವನ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಮಂದಾರ್ತಿ ಮತ್ತು ಬಾರ್ಕೂರು ಎಕ್ಸ್ಪ್ರೆಸ್ ಫೀಡರಿನಲ್ಲಿ ಹಿರಿಯಡ್ಕ ಪೇಟೆ, ಪಾಪುಜೆ, ಬಜೆ, ಬಜೆ ವಾಟರ್ ಸಪ್ಲೆöÊ, ಬಜೆ ಪಂಪ್ ಹೌಸ್, ಅಲಂಗಾರ್, ಜೋಗಿಬೆಟ್ಟು, ಹತ್ರಬೈಲು, ಪೆರ್ಡೂರು, ಮೇಲ್ಪೇಟೆ, ಕುಂತಳಕಟ್ಟೆ, ಎಳ್ಳಾರೆ, ಪಾಡಿಗಾರ, ಹೊಸಾಳ, ಕಚ್ಚೂರು, ಹೇರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಶಿರೂರು, ನಂಚಾರು, ಹಿಲಿಯಾಣ, ಮಂದಾರ್ತಿ, ಹೆಬ್ಬಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 18 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅನಿಯಮಿತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
33/11ಕೆ.ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಚಿಟ್ಪಾಡಿ ಮತ್ತು ಉದ್ಯಾವರ-1 ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಇಂದಿರಾನಗರ, ಕಸ್ತೂರ್ಬಾ ನಗರ, ಕುಕ್ಕಿಕಟ್ಟೆ, ಪದ್ಮನಾಭನಗರ, ಚಿಟ್ಪಾಡಿ, ಹನುಮಾನ್ ಗ್ಯಾರೇಜ್, ಅಮ್ಮಣ್ಣಿ ರಾಮಣ್ಣ ಹಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು. 18 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 110/11ಕೆ.ವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಬ್ರಹ್ಮಾವರ, ಮಾಬುಕಳ ಫೀಡರ್ ಮಾರ್ಗದಲ್ಲಿ ಹಾಗೂ 110/11ಕೆ.ವಿ ಮಧುವನ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್ಪ್ರೆಸ್ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಂದಾಡಿ, ಬೇಳೂರುಜೆಡ್ಡು, ಬ್ರಹ್ಮಾವರ, ರಥಬೀದಿ, ಚಾಂತಾರು, ವಾರಂಬಳ್ಳಿ, ಕುಮ್ರಗೋಡು, ಉಪ್ಪಿನಕೋಟೆ, ಬಾಳ್ತಾರು, ಸೂಲ್ಕುದ್ರು, ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು. 18 ರಂ,ದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಾವುಂದ ಕೊಯಾನಗರ ರೈಲ್ವೆಬ್ರಿಡ್ಜ್ ರೋಡ್ ಕ್ರಾಸ್ 11 ಕೆ.ವಿ ಆಲೂರು, ಬಡಾಕೆರೆ ಹಾಗೂ ಹೇರೂರು ಮಾರ್ಗಗಳ ಓವರ್ಹೆಡ್ ಮಾರ್ಗವನ್ನು ಭೂಗತ ಕೇಬಲ್ ಮಾರ್ಗಕ್ಕೆ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, 110/11 ಕೆ.ವಿ ನಾವುಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ 33/11 ಕೆ.ವಿ ಬೈಂದೂರು ಮತ್ತು ಕೊಲ್ಲೂರು ಮಾರ್ಗ ಮತ್ತು 11 ಕೆ.ವಿ ಆಲೂರು, ಬಡಾಕೆರೆ ಹಾಗೂ ಹೇರೂರು ಮಾರ್ಗಗಳಲ್ಲಿ ಬೈಂದೂರು, ಉಪ್ಪುಂದ, ಶಿರೂರು, ಗಂಗನಾಡು, ತೂದಳ್ಳಿ, ತಗ್ಗರ್ಸೆ, ಯಡ್ತರೆ, ಕೊಲ್ಲೂರು, ಜಡ್ಕಲ್, ಇಡೂರು, ಹೊಸೂರು, ಮುದೂರು, ಗೋಳಿಹೊಳೆ,, ಯಳಜಿತ್, ಆಲೂರು, ಬಡಾಕೆರೆ ಮತ್ತು ಹೇರೂರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು. 18 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.
ಕೆ.ಪಿ.ಸಿ.ಎಲ್ ವತಿಯಿಂದ ಹೊಸಂಗಡಿ ಗ್ರಾಮದ ವರಾಹಿ ವಿದ್ಯುದಾಗಾರದಲ್ಲಿ ಬ್ಲ್ಯಾಕ್ ಸ್ಟಾರ್ಟ್ ಪ್ರೊಸೀಜರ್ ಕೈಗೊಳ್ಳುವುದರಿಂದ 110 ಕೆ.ವಿ ಹಿರಿಯಡ್ಕ-ಮಧುವನ-ಕುಂದಾಪುರ-ನಾವುಂದ ಹಾಗೂ 33/11 ಕೆ.ವಿ ಉಪಕೇಂದ್ರಗಳಾದ ತಲ್ಲೂರು, ಬೈಂದೂರು, ಕೊಲ್ಲೂರು, ಗಂಗೊಳ್ಳಿ ಮತ್ತು ಜಿ.ಐ.ಎಸ್ ಕೋಟ ಗಳಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳ ಜೊತೆಗೆ 33 ಕೆ.ವಿ. ಕುಂದಾಪುರ-ಗಂಗೊಳ್ಳಿ ಮಾರ್ಗ, 33 ಕೆ.ವಿ ಸೌಪರ್ಣಿಕಾ ಏತ ನೀರಾವರಿ ಸ್ಥಾವರ ಆಲೂರು, 33 ಕೆ.ವಿ ಸೌಕೂರು ಏತ ನೀರಾವರಿ ವಿದ್ಯುತ್ ಮಾರ್ಗ ಹಾಗೂ ಮೆ|| ಕೊಂಕಣ ರೈಲ್ವೆ ನಿಗಮ ನಿಯಮಿತದ 110 ಕೆವಿ ಸೇನಾಪುರ ಟಿಎಸ್ಎಸ್ ನಿರಂತರವಾಗಿಲ್ಲದಂತೆ ವಿದ್ಯುತ್ ವ್ಯತ್ಯಯ ಉಂಟಾಗುವ ಸಂಭವವಿದ್ದು, ಈ ಎಲ್ಲಾ ಉಪಕೇಂದ್ರಗಳಿಂದ ಸಂಪರ್ಕಿತವಾದ ಮೆಸ್ಕಾಂ ಕುಂದಾಪುರ ವಿಭಾಗ ವ್ಯಾಪ್ತಿಯ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿನ ಎಲ್ಲಾ ಪ್ರದೇಶಗಳಾದ ಕುಂದಾಪುರ ಪೇಟೆ, ಹಂಗ್ಳೂರು, ಬೀಜಾಡಿ, ಗೋಪಾಡಿ, ಜಪ್ತಿ ವಾಟರ್ ಸಪ್ಲೈ, ಕೋಣಿ, ಕಂದಾವರ, ಬಳ್ಕೂರು, ಹಳ್ನಾಡು, ಅಂಪಾರು, ಕಾವ್ರಾಡಿ, ಜಪ್ತಿ, ಹೊಂಬಾಡಿ-ಮAಡಾಡಿ, ಕಾಳಾವರ, ಅಸೋಡು, ಬಸ್ರೂರು, ಕೋಡಿ, ಅನಗಳ್ಳಿ, ಕುಂಭಾಶಿ, ತೆಕ್ಕಟ್ಟೆ, ವಕ್ವಾಡಿ, ಕೋಟೇಶ್ವರ, ಮೊಳಹಳ್ಳಿ, ಕೊರ್ಗಿ, ಯಡಾಡಿ-ಮತ್ಯಾಡಿ, ವಂಡ್ಸೆ, ಗುಲ್ವಾಡಿ, ಬಾಂಡ್ಯ, ಗಂಗೊಳ್ಳಿ, ಶಿರೂರು, ಉಪ್ಪುಂದ, ಬಿಜೂರು, ಕೊಲ್ಲೂರು, ತಗ್ಗರ್ಸೆ, ಕರ್ಕುಂಜೆ, ಕೆರಾಡಿ, ಆಜ್ರಿ, ತಲ್ಲೂರು, ಬೈಂದೂರು, ಗೋಳಿಹೊಳೆ, ಯಳಜಿತ್, ಗಂಗನಾಡು, ನಾಡಾ, ಹೊಸಾಡು, ಗುಜ್ಜಾಡಿ, ಹೊಸೂರು, ಹಡವು, ದೇವಲ್ಕುಂದ, ಕಿರಿಮಂಜೇಶ್ವರ, ಅರೆಶಿರೂರು, ಎಲ್ಲೂರು, ಬಾಳ್ಕೊಡ್ಲು, ಹಾಲ್ಕಲ್, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್ ಬೀಸಿನಪಾರೆ, ಸೆಳ್ಕೊಡು, ಕಾನ್ಕಿ, ಮೆಕ್ಕೆ, ಮುದೂರು, ಅರೆಹೊಳೆ, ನಾಗೂರು ನಾವುಂದ, ಮರವಂತೆ, ಹೇರೂರು, ಕೆರ್ಗಾಲ್, ತ್ರಾಸಿ, ಕೆಂಚನೂರು, ಯಡ್ತರೆ, ಪಡುವರಿ, ಹೆಮ್ಮಾಡಿ, ಕಟ್ಬೆಲ್ತೂರು, ಬೆಳ್ಳಾಲ, ಕೊಡ್ಲಾಡಿ, ಚಿತ್ತೂರು, ಹಟ್ಟಿಯಂಗಡಿ, ಬಡಾಕೆರೆ, ಕಾಲ್ತೋಡು, ಆಲೂರು, ಹರ್ಕೂರು, ಹಕ್ಲಾಡಿ, ನೂಜಾಡಿ, ಕುಂದಬಾರAದಾಡಿ, ಸೇನಾಪುರ, ಕಂಬದಕೋಣೆ, ಉಳ್ಳೂರು-11, ಹೆರಂಜಾಲು, ನಂದನವನ, ಜಡ್ಕಲ್, ಇಡೂರು-ಕುಂಜ್ಞಾಡಿ, ಮುದೂರು, ಮುಳ್ಳಿಕಟ್ಟೆ, ಕನ್ಯಾನ, ಉಪ್ಪಿನಕುದ್ರು, ಉಳ್ತೂರು, ಕೆದೂರು, ಬೇಳೂರು, ವಡ್ಡರ್ಸೆ, ಗಿಳಿಯಾರು, ಬನ್ನಾಡಿ, ಮಣೂರು, ಕೋಟತಟ್ಟು, ಸಾಲಿಗ್ರಾಮ ಟಿ.ಎಮ್.ಸಿ, ಕಾರ್ಕಡ, ಚಿತ್ರಪಾಡಿ, ಪಾರಂಪಳ್ಳಿ, ಪಾಂಡೇಶ್ವರ, ಮೂಡಹಡು, ಐರೋಡಿ, ಗುಂಡ್ಮಿ, ಕಾವಡಿ, ಯಡ್ತಾಡಿ, ಹೆಗ್ಗುಂಜೆ, ಶಿರಿಯಾರ, ಶಿರೂರು, ಬಿಲ್ಲಾಡಿ, ವಂಡಾರು, ಆವರ್ಸೆ, ಕಕ್ಕುಂಜೆ, ಅಚ್ಲಾಡಿ, ಹಳ್ಳಾಡಿ-ಹರ್ಕಾಡಿ, ಹೆಸ್ಕತ್ತೂರು, ಕೊರ್ಗಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು. 18 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.
110/11 ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬಿದ್ಕಲ್ಕಟ್ಟೆ, ಬೆಳ್ವೆ ಮತ್ತು ಬೈಲೂರು ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳ್ವೆ, ಅಲ್ಬಾಡಿ, ಆರ್ಡಿ, ಮರೂರು, ಮಡಾಮಕ್ಕಿ, ಶೇಡಿಮನೆ, ಬಿದ್ಕಲ್ಕಟ್ಟೆ, ಗಾವಳಿ, ಹಾರ್ದಳ್ಳಿ-ಮಂಡಳ್ಳಿ, ಯಡಾಡಿ-ಮತ್ಯಾಡಿ, ಬೈಲೂರು, ಕೊಂಡಳ್ಳಿ, ಕಾಜಾಡಿ, ಕುಳುಂಜೆ, ಶಂಕರನಾರಾಯಣ, ಕಕ್ಕುಂಜೆ, ಹಾಲಾಡಿ-76, ಹೆಸ್ಕತ್ತೂರು, ಹಾಲಾಡಿ-28, ಹಳ್ಳಾಡಿ-ಹರ್ಕಾಡಿ ಮತ್ತು ಮೊಳಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು. 18 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 33/11 ಕೆ.ವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಶಿವಪುರ, ಚಾರ, ಮುದ್ರಾಡಿ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಚಾರ, ಹೊಸೂರು, ಶಿವಪುರ, ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಕನ್ಯಾನ, ಸರ್ಕಾರಿ ಆಸ್ಪತ್ರೆ ಬಳಿ, ಮುದ್ರಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 19 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.