ಉಡುಪಿ, ಜು. 14: ಕಳೆದ 27 ವರ್ಷಗಳಿಂದ ಸಕ್ರಿಯವಾಗಿ ಜನಹಿತ ಕಾರ್ಯಕ್ರಮಗಳ ಮೂಲಕ ರೋಟರಿ ಸಂಘಟನೆಗೆ ಒತ್ತು ನೀಡುತ್ತಿರುವ ರೋಟರಿ ಮಣಿಪಾಲ ಹಿಲ್ಸ್ ನ 2023-24 ರ ಸಾಲಿನ ಅಧ್ಯಕ್ಷರಾಗಿ ಸಿ. ರಮಾನಂದ ಭಟ್ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಭಾರತ ಹಾಗೂ ಓಮಾನ್ ದೇಶಗಳಲ್ಲಿನ ಪ್ರತಿಷ್ಠಿತ ಆಸ್ರತ್ರೆಗಳಲ್ಲಿ ವೈದ್ಯಕೀಯ ದಾಖಲೆಗಳ ಹಿರಿಯ ಅಧಿಕಾರಿಯಾಗಿ ಸುಮಾರು 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದು, ಕೋಟ ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ನಾರಾಯಣ ಭಟ್, ಕಾರ್ಯದರ್ಶಿಯಾಗಿ ಉಪ್ಪುಂದ ಮೈಯ್ಯ, ಖಜಾಂಚಿಯಾಗಿ ಹೆಚ್ ವಿಶ್ವನಾಥ ರಾವ್ ಆಯ್ಕೆಯಾಗಿದ್ದಾರೆ.
ರೋಟರಿ ಮಣಿಪಾಲ ಹಿಲ್ಸ್ ಅಧ್ಯಕ್ಷರಾಗಿ ಸಿ ರಮಾನಂದ ಭಟ್ ಆಯ್ಕೆ
ರೋಟರಿ ಮಣಿಪಾಲ ಹಿಲ್ಸ್ ಅಧ್ಯಕ್ಷರಾಗಿ ಸಿ ರಮಾನಂದ ಭಟ್ ಆಯ್ಕೆ
Date: