ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್, ಜು. 12: ಇಂದು ನೀವೆಲ್ಲರೂ ಗೂಗಲ್ ತೆರೆದ ಸಂದರ್ಭದಲ್ಲಿ ಅಲ್ಲೊಂದು ಪಾನಿಪುರಿಯ ಡೂಡಲ್ ನೋಡಿರಬಹುದು. ಹೌದು, ಗೂಗಲ್ ಡೂಡಲ್ ನಲ್ಲಿ ಭಾರತದ ಜನಪ್ರಿಯ ಸ್ಟ್ರೀಟ್ ಫುಡ್ ‘ಪಾನಿಪುರಿ’ಯ ಬಗ್ಗೆ ಅತ್ಯಾಕರ್ಷಕವಾಗಿ ಸಚಿತ್ರ ಮಾಹಿತಿ ನೀಡುವ ಗೂಗಲ್ ವಿಶೇಷ ಗೌರವ ನೀಡಿದೆ. ಮಧ್ಯಪ್ರದೇಶದ ಇಂದೋರ್ ನ ಹೊಟೇಲೊಂದರ ವಾರ್ಷಿಕೋತ್ಸವವನ್ನು ಗುರುತಿಸಲು ಟೆಕ್ ದೈತ್ಯ ಈ ದಿನವನ್ನು ಆಯ್ಕೆ ಮಾಡಿದೆ. ಇದು ಸಾಮಾನ್ಯ ಹೊಟೇಲಲ್ಲ. 2015 ರಲ್ಲಿ 51 ಬಗೆಯ ಪಾನಿ ಪುರಿಯನ್ನು ತಯಾರಿಸುವ ಮೂಲಕ ವಿಶ್ವ ದಾಖಲೆಯನ್ನು ಈ ಹೊಟೇಲು ನಿರ್ಮಿಸಿದೆ.
ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಪಾನಿ ಪುರಿ ಎಂದು ಕರೆದರೆ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ನವದೆಹಲಿಯಲ್ಲಿ ಇದನ್ನು ‘ಗೋಲ್ ಗಪ್ಪೆ’ ಅಥವಾ ‘ಗೋಲ್ ಗಪ್ಪಾ’ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ ಇದನ್ನು ಪುಚ್ಕಾ ಅಥವಾ ಫುಚ್ಕಾ ಎಂದು ಕರೆಯಲಾಗುತ್ತದೆ. ಪಾನಿ ಪುರಿಯನ್ನು ಕಂಡುಹಿಡಿದದ್ದು ದ್ರೌಪದಿ ಎಂದು ಮಹಾಭಾರತದ ಕಥೆ ಹೇಳುತ್ತದೆ.