ಬಾಲಸೋರ್, ಜು. 8: ಜೂನ್ 2 ರಂದು ನಡೆದ ಒಡಿಶಾದ ಬಾಲಸೋರ್ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಮೂವರು ರೈಲ್ವೆ ಸಿಬ್ಬಂದಿಗಳನ್ನು ಸಿಬಿಐ ಬಂಧಿಸಿದೆ. ಹಿರಿಯ ಸೆಕ್ಷನ್ ಎಂಜಿನಿಯರ್ (ಸಿಗ್ನಲ್) ಅರುಣ್ ಕುಮಾರ್ ಮಹಾಂತ, ಸೆಕ್ಷನ್ ಎಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ತಂತ್ರಜ್ಞ ಪಪ್ಪು ಕುಮಾರ್ ಎಂಬವರನ್ನು ಬಂಧಿಸಲಾಗಿದ್ದು, ಐದು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ. ಐಪಿಸಿ ಸೆಕ್ಷನ್ 304 ಮತ್ತು 201 ಅಡಿಯಲ್ಲಿ ಮೂವರನ್ನು ಬಂಧಿಸಲಾಗಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, 293 ಜನರು ಸಾವನ್ನಪ್ಪಿದ್ದರು.
ಬಾಲಸೋರ್ ರೈಲು ಅಪಘಾತ: ಮೂವರು ರೈಲ್ವೆ ಸಿಬ್ಬಂದಿಗಳ ಬಂಧನ
ಬಾಲಸೋರ್ ರೈಲು ಅಪಘಾತ: ಮೂವರು ರೈಲ್ವೆ ಸಿಬ್ಬಂದಿಗಳ ಬಂಧನ
Date: