ಉಡುಪಿ, ಜು. 4: ವಿದ್ಯಾರ್ಥಿ ಮಿತ್ರ ಸೇವಾ ಟ್ರಸ್ಟ್ (ರಿ.) ಅಚ್ಲಾಡಿ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬನ್ನಾಡಿ – ವಡ್ದರ್ಸೆ ಪ್ರಾಯೋಜಕತ್ವದಲ್ಲಿ ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಇಲ್ಲಿಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಾರ್ಯಗಾರ ನಡೆಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ, ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ್ ಎಂ ಎನ್., ವಿವಿಧ ಬಗೆಯ ಮಾದಕ ವಸ್ತುಗಳ ಕುರಿತು ವಿವರಿಸಿ, ಹದಿಹರೆಯದವರನ್ನು ಗೇಟ್ ವೇ ಆಫ್ ಡ್ರಗ್ಸ್ ಗಳು ಹೇಗೆ ಆಕರ್ಷಿಸಿ ತಮ್ಮೆಡೆಗೆ ಸೆಳೆದುಕೊಂಡು ಬದುಕನ್ನು ನಾಶಪಡಿಸುತ್ತದೆ ಎಂಬುದನ್ನು ತಿಳಿಸಿದರು. ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಗಾಯತ್ರಿ ಸ್ವಾಗತಿಸಿ, ಶಿಕ್ಷಕ ಆನಂದ ಶೆಟ್ಟಿ ವಂದಿಸಿದರು.
ವಡ್ಡರ್ಸೆ: ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಾರ್ಯಗಾರ
ವಡ್ಡರ್ಸೆ: ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಾರ್ಯಗಾರ
Date: