ಬರ್ಲಿನ್, ಜೂನ್ 29: ಭಾರತ ತನ್ನ ವಿಶೇಷ ಒಲಿಂಪಿಕ್ಸ್ ವಿಶ್ವ ಕ್ರೀಡಾಕೂಟದ ಅಭಿಯಾನವನ್ನು 76 ಚಿನ್ನ ಸೇರಿದಂತೆ 202 ಪದಕಗಳೊಂದಿಗೆ ಮುಕ್ತಾಯಗೊಳಿಸಿತು. ಟ್ರ್ಯಾಕ್ ಸ್ಪರ್ಧೆಗಳಿಂದ (2 ಚಿನ್ನ, 3 ಬೆಳ್ಳಿ, 1 ಕಂಚು) ಭಾರತೀಯ ಕ್ರೀಡಾಪಟುಗಳು ಆರು ಪದಕಗಳನ್ನು ಗೆದ್ದರು.
ಆಂಚಲ್ ಗೋಯಲ್ (400 ಮೀ, ಲೆವೆಲ್ ಬಿ ಮಹಿಳೆ) ಮತ್ತು ರವಿಮತಿ ಆರ್ಮುಗಂ (400 ಮೀ, ಲೆವೆಲ್ ಸಿ ಮಹಿಳೆ) ಪದಕ ಗೆದ್ದವರಲ್ಲಿ ಪ್ರಮುಖರು. ಈ ಹಿಂದೆ ಮಿನಿ ಜಾವೆಲಿನ್ ಲೆವೆಲ್ ಬಿ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಾಕೇತ್ ಕುಂಡು, ಲೆವೆಲ್ ಬಿ 400 ಮೀಟರ್ ಓಟದಲ್ಲಿ ಕಂಚು ಗೆದ್ದಿದ್ದಾರೆ. ಬೌದ್ಧಿಕ ವಿಕಲಚೇತನರಲ್ಲಿ ಏಕತೆ, ವೈವಿಧ್ಯತೆ ಮತ್ತು ವಿಶೇಷ ಕೌಶಲ್ಯಗಳನ್ನು ಆಚರಿಸುವ ಜಾಗತಿಕ ಬಹುಕ್ರೀಡಾ ಪ್ರದರ್ಶನದಲ್ಲಿ ಭಾರತವು 76 ಚಿನ್ನ, 75 ಬೆಳ್ಳಿ ಮತ್ತು 51 ಕಂಚಿನ ಪದಕಗಳನ್ನು ಗಳಿಸಿದೆ.