ಉಡುಪಿ, ಜೂನ್ 28: ಪ್ರಸಕ್ತ ಸಾಲಿನ ಮೀನುಗಾರಿಕೆ ಋತುವಿನ ಅವಧಿಗೆ ಮೀನುಗಾರಿಕೆ ಪರವಾನಗಿ ಮತ್ತು ಡೀಸಿಲ್ ಪಾಸ್ ಪುಸ್ತಕ ಪಡೆಯಲು, ಮೀನುಗಾರಿಕೆ ನಿರ್ದೇಶಕರು, ಬೆಂಗಳೂರು ರವರ ನಿರ್ದೇಶನದಂತೆ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಧಕ್ಕೆಯಲ್ಲಿ ನಿಲುಗಡೆಯಾಗಿರುವ ಜಿಲ್ಲೆಯ ಎಲ್ಲಾ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳ ಭೌತಿಕ ಪರಿಶೀಲನೆ ಮತ್ತು ಸಮೀಕ್ಷೆ ನಡೆಸಲು ಮತ್ತು ಮೀನುಗಾರಿಕೆ ಪರವಾನಗಿ ಮತ್ತು ಡೀಸಿಲ್ ಪಾಸ್ ಪುಸ್ತಕ ವಿತರಿಸುವ ಸಲುವಾಗಿ ಮೀನುಗಾರಿಕೆ ಜಂಟಿ ನಿರ್ದೇಶಕರು, ಉಡುಪಿ ರವರು ತಂಡಗಳನ್ನು ರಚಿಸಿ ಮೀನುಗಾರಿಕಾ ದೋಣಿಗಳ ಪರಿಶೀಲನೆ ನಡೆಸಿ ವರದಿ ನೀಡಬೇಕಿದೆ.
ಅದರಂತೆ ಜುಲೈ 3 ರಿಂದ 5 ರ ವರೆಗೆ ಮೀನುಗಾರಿಕಾ ದೋಣಿಗಳ ಪರಿಶೀಲನೆ ನಡೆಸಲಾಗುವುದು. ಪರಿಶೀಲನೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಯಾಂತ್ರೀಕೃತ ಬೋಟುಗಳ ಮಾಲೀಕರು ಕಡ್ಡಾಯವಾಗಿ ಹಾಜರಿದ್ದು, ಭೌತಿಕ ಪರಿಶೀಲನೆಗೆ ಸಹಕರಿಸುವಂತೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.