ತೆಂಕನಿಡಿಯೂರು, ಜೂನ್ 20: ವ್ಯವಹಾರದ ಅರಿವು ಅಧ್ಯಯನ ಅನುಸರಣೆ ಮತ್ತು ಅನುಷ್ಠಾನದ ಹಿಂದಿನ ಕಾರಣ ದೃಷ್ಟಾಂತ ಮತ್ತು ಸಂಶೋಧಕರ ಕೊಡುಗೆಗಳನ್ನು ಅರಿತು ವಿಶ್ಲೇಷಿಸುವ ಅಗತ್ಯವಿದೆ. ಹೊಸ ಶಿಕ್ಷಣ ನೀತಿಯಲ್ಲಿಯೂ ಸಹ ಪಠ್ಯದೊಂದಿಗೆ ಪ್ರಾಯೋಗಿಕ ವಿಚಾರಗಳ ಅಧ್ಯಯನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ವ್ಯವಹಾರದ ಅಧ್ಯಯನ ವಿಜ್ಞಾನವಾದರೆ ಜ್ಞಾನದ ಅನುಷ್ಠಾನ ಒಂದು ಕಲೆಯಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯಶಾಸ್ತ್ರಗಳ ಮಾದರಿಯ ಪ್ರದರ್ಶನ ಮತ್ತು ಪ್ರಸ್ತುತಿಯ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರೊ. ದಿನೇಶ್ ನುಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಐಕ್ಯುಎಸಿ ಸಹಯೋಗದೊಂದಿಗೆ ಏರ್ಪಡಿಸಿದ್ದ ‘ಕಮರ್ಷಿಯಂ’ ವಾಣಿಜ್ಯಶಾಸ್ತ್ರ ಮಾದರಿಗಳ ಪ್ರದರ್ಶನ ಮತ್ತು ಪ್ರಸ್ತುತಿ ಉದ್ಘಾಟಿಸಿ ಅವರು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ‘ಕಮರ್ಷಿಯಂ’ ಶಬ್ದದ ಅರ್ಥ ಮತ್ತು ಹಿನ್ನಲೆಯನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಟಿ.ಜಿ ಭಟ್, ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಸಹಾಯಕ ಪ್ರಾಧ್ಯಾಪಕರಾದ ಡಾ. ಉದಯ ಶೆಟ್ಟಿ ಕೆ., ಸ್ನಾತಕ ವಿಭಾಗ ಮುಖ್ಯಸ್ಥೆ ಬಿಂದು ಟಿ., ವ್ಯವಹಾರಶಾಸ್ತ್ರ ಮುಖ್ಯಸ್ಥರಾದ ಡಾ. ರಘು ನಾಯ್ಕ, ಸಹ ಪ್ರಾಧ್ಯಾಪಕರಾದ ಉಮೇಶ್ ಪೈ, ಉಪನ್ಯಾಸಕಿ ಸೋನಿಯಾ ನೊರೋನ್ಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಂಕಾಂ ಪ್ರಥಮ ಮತ್ತು ದ್ವಿತೀಯ ವಿಭಾಗದ ವಿದ್ಯಾರ್ಥಿಗಳು 20ಕ್ಕೂ ಅಧಿಕ ಮಾದರಿಗಳ ಪ್ರದರ್ಶನ ಮತ್ತು ಪ್ರಸ್ತುತಿಗೈದರು. ತೃತೀಯ ಎಂಕಾಂ ಶ್ರೀಶ ಸ್ವಾಗತಿಸಿ, ತ್ರಿವೇಣಿ ನಿಂಜೂರು ವಂದಿಸಿದರು. ಸ್ಮಿತಾ
ಮತ್ತು ಬಳಗ ಪ್ರಾರ್ಥಿಸಿದರು. ಉಪನ್ಯಾಸಕಿ ನಿರೂಪಣೆಗೈದರು.