ಕಾರ್ಕಳ, ಜೂನ್ 18: ಸಾಮಾನ್ಯ ಪ್ರವೇಶ ಪರೀಕ್ಷೆ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ತಾಂತ್ರಿಕ ದೋಷದಿಂದ ಕೆಲ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಆ ಪರಿಷೃತ ಫಲಿತಾಂಶವು ಪ್ರಕಟಗೊಂಡಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ನಿಶಾಂತ್ ಎನ್ ಹೆಗ್ಡೆ 1072 ನೇ ರ್ಯಾಂಕ್ ಹಾಗೂ ಸಾತ್ವಿಕ್ ಬಿ.ಸಿ 1387 ನೇ ರ್ಯಾಂಕ್ ಪಡೆಯುವುದರ ಮೂಲಕ ಜ್ಞಾನಸುಧಾದ ೨ಸಾವಿರದೊಳಗಿನ ರ್ಯಾಂಕ್ಗಳ ೪೩ಕ್ಕೆ ಏರಕೆಯಾಗಿದೆ. ಜೊತೆಗೆ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೆ-ಸಿಇಟಿ ಇಂಜಿನಯರಿಂಗ್ನಲ್ಲಿ ಸಾವಿರದೊಳಗಿನ ರ್ಯಾಂಕ್ ಬಂದಿರುವುದು ಹಾಗೂ ಪ್ರಣವ್ ಗುಜ್ಜರ್ ಕೃಷಿ ವಿಭಾಗದಲ್ಲಿ 6ನೇ ರ್ಯಾಂಕ್ ಹಾಗು ಇಂಜಿನಿಯರಿಂಗ್ ವಿಭಾಗದಲ್ಲಿ 68ನೇ ರ್ಯಾಂಕ್ ಗಳಿಸಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಪರಿಷ್ಕೃತ ಕೆ-ಸಿಇಟಿ ಫಲಿತಾಂಶ ಪ್ರಕಟ: ಜ್ಞಾನಸುಧಾದದ ಇಬ್ಬರಿಗೆ 2 ಸಾವಿರದೊಳಗಿನ ರ್ಯಾಂಕ್
ಪರಿಷ್ಕೃತ ಕೆ-ಸಿಇಟಿ ಫಲಿತಾಂಶ ಪ್ರಕಟ: ಜ್ಞಾನಸುಧಾದದ ಇಬ್ಬರಿಗೆ 2 ಸಾವಿರದೊಳಗಿನ ರ್ಯಾಂಕ್
Date: