ಬ್ರಹ್ಮಾವರ, ಜೂನ್ 17: ಎಸ್. ಎಂ.ಎಸ್. ಕಾಲೇಜಿನ 43ನೇ ವಿದ್ಯಾರ್ಥಿ ಸಂಘದ ದಿನಾಚರಣೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾಗಿರುವ ರೆ. ಫಾ. ಎಂ.ಸಿ ಮಥಾಯ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಪ್ರೊ. ರಾಜಶೇಖರ್ ಹೆಬ್ಬಾರ್. ಸಿ ಇವರು ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಓ.ಎಸ್.ಸಿ.ಇ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಅಲೆನ್ ರೋಹನ್ ವಾಜ್, ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಉಡುಪ, ಉಪಪ್ರಾಂಶುಪಾಲರು, ವಿದ್ಯಾರ್ಥಿ ಸಂಘದ ನಿರ್ದೇಶಕರಾಗಿರುವ ಡಾ. ವಿದ್ಯಾಲತಾ, ಕಾಲೇಜು ವಿಭಾಗದ ನಾಯಕ ದಿವ್ಯಾಂಶು, ಉಪನಾಯಕ ನವನೀತ್, ಉಪನಾಯಕಿ ಪ್ರೀತಿ, ಕಾರ್ಯದರ್ಶಿ ಆರಾಧ್ಯ, ಜೊತೆ ಕಾರ್ಯದರ್ಶಿ ಅವನಿಷ್ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ನಾಯಕಿ ನಂದಿತಾ ಹೆಗ್ಡೆ, ಉಪನಾಯಕ ರೆನ್ಸನ್ ಮಸ್ಕರೇನಸ್, ಕಾರ್ಯದರ್ಶಿ ಪ್ರತಿಮಾ ರೊಡ್ರಿಗೌಸ್, ಜೊತೆ ಕಾರ್ಯದರ್ಶಿ ರಶ್ಮಿತಾ ಉಪಸ್ಥಿತರಿದ್ದರು.