ಕಾರ್ಕಳ, ಜೂನ್ 17: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಲಾದ 2023ರ ಸಾಲಿನ ಕಾಮೆಡ್ ಕೆ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು ಜ್ಞಾನಸುಧಾದ ಐವರು ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದು, ಪ್ರಭಂಜನ್ ಬಾಬು 99.9018012 ಪರ್ಸಂಟೈಲ್‌ನೊಂದಿಗೆ 82ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಹಾಸನದ ಉದ್ಯಮಿ ಸುರೇಶ್ ಬಾಬು ಮತ್ತು ಮಮತಾ ಸುರೇಶ್ ದಂಪತಿಯ ಪುತ್ರ. ಈ ಬಾರಿಯ ಕೆ.ಸಿ.ಇ.ಟಿ.ಫಲಿತಾಂಶದಲ್ಲಿ ಇವರು 341ನೇ ರ‍್ಯಾಂಕ್ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
99.7249254 ಪರ್ಸಂಟೈಲ್‌ನೊಂದಿಗೆ ಶ್ರೇಯಸ್ ಆರ್ ಗೌಡ 227ನೇ ರ‍್ಯಾಂಕ್, 99.5942838 ಪರ್ಸಂಟೈಲ್‌ನೊಂದಿಗೆ ಕೀರ್ತನಾ ಎಚ್.ಭಟ್ 331ನೇ ರ‍್ಯಾಂಕ್, 99.3123135 ಪರ್ಸಂಟೈಲ್‌ನೊಂದಿಗೆ ಸಮ್ಯಕ್ ರಾವ್ 571ನೇ ರ‍್ಯಾಂಕ್, 99.3123135 ಪರ್ಸಂಟೈಲ್‌ನೊಂದಿಗೆ ಸಾತ್ವಿಕ್ ಬಿ,ಸಿ. 575ನೇ ರ‍್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಹಾಗೂ ಜ್ಞಾನಸುಧಾ ಪರಿವಾರವು ಅಭಿನಂದನೆಯನ್ನು ಸಲ್ಲಿಸಿದೆ.