Monday, November 25, 2024
Monday, November 25, 2024

ತೆಂಕನಿಡಿಯೂರು: ಹೂಡಿಕೆದಾರರ ಜಾಗೃತಿ ಕಾರ್ಯಗಾರ

ತೆಂಕನಿಡಿಯೂರು: ಹೂಡಿಕೆದಾರರ ಜಾಗೃತಿ ಕಾರ್ಯಗಾರ

Date:

ತೆಂಕನಿಡಿಯೂರು, ಜೂನ್ 15: ಹೂಡಿಕೆಯ ಬಗೆಗಿನ ಜಾಗೃತಿ ಯಶಸ್ವಿ ಜೀವನದ ಪ್ರಮುಖ ಅಂಗ. ಸಕಾಲದಲ್ಲಿ ತೆಗೆದುಕೊಳ್ಳುವ ಹೂಡಿಕೆಯ ನಿರ್ಧಾರಗಳು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಮಯವೇ ಹಣವಿದ್ದಂತೆ. ನಮ್ಮಲ್ಲಿನ ಉಳಿತಾಯ ಸರಿಯಾದ ಸಮಯದೊಂದಿಗೆ ನಷ್ಟ ಅನಿಶ್ಚಿತತೆಯನ್ನು ಎದುರಿಸುವ ಮನೋಭಾವದೊಂದಿಗೆ ವಿವಿಧ ಹೂಡಿಕೆಗಳ ಆಳವಾದ ಅರಿವಿನೊಂದಿಗೆ ತೊಡಗಿಸಿದರೆ ಒಬ್ಬ ವ್ಯಕ್ತಿ ಶಕ್ತಿಯಾಗಿ ಬದಲಾಗಲು ಸಾಧ್ಯ ಎಂದು ಪ್ರೊ. ಸುರೇಶ್ ರೈ ಕೆ. ಹೇಳಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಡಿಯೂರು ಇದರ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರ ಶಿಕ್ಷಕರ ಸಂಘ (ಮುಕ್ತ) ಸಹಯೋಗದಲ್ಲಿ ಏರ್ಪಡಿಸಿದ ‘ಹೂಡಿಕೆದಾರರ ಜಾಗೃತಿಯ ಒಂದು ದಿನದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಬಿಂದು ಟಿ. ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ನಿರ್ವಹಣಾಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರಘು ನಾಯ್ಕ, ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ. ಪ್ಲೇಸ್ಮೆಂಟೆ ಸೆಲ್ ಸಂಚಾಲಕರಾದ ಉಮೇಶ್ ಪೈ, ಸಹ ಪ್ರಾಧ್ಯಾಪಕರಾದ ಉದಯ ಶೆಟ್ಟಿ ಕೆ ಉಪಸ್ಥಿತರಿದ್ದರು. ಮೂರು ಅಧಿವೇಶನಗಳಲ್ಲಿ ನಡೆದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸಪ್ನ ಶೆಣೈ ಎಂ., ನವೀನ್ ರೇಗೋ, ಲಿಯೋ ಅಮಲ್ ಎ., ಹೂಡಿಕೆಯ ವಿವಿಧ ಮಜಲುಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಾದ ವರ್ಷ, ಸಿಂಚನ ಮತ್ತು ವಾಣಿಶ್ರೀ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ವೆಂಕಟೇಶ್ ಭಟ್, ಸ್ಮಿತಾ, ಸೋನಿಯಾ, ಧನ್ಯ, ಮಮತಾ ಅಧಿವೇಶನಗಳನ್ನು ನಿರ್ವಹಿಸಿದರು. ವಿದ್ಯಾರ್ಥಿಗಳಾದ ಕೌಶಿಕ್ ಮತ್ತು ನಿಸಾರ್ ತಾಂತ್ರಿಕ ವರ್ಗದಲ್ಲಿ ಸಹಕರಿಸಿದರು. ಕಾಲೇಜಿನ ಬಿಬಿಎ ಮತ್ತು ಬಿಕಾಂ ವಿಭಾಗದ ೧೭೦ ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!