ಉಡುಪಿ, ಜೂನ್ 12: ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ವ್ಯಥೆಯಿಂದ ಬಳಲುತ್ತಿರುವವರು, ಪರೀಕ್ಷಾ ಒತ್ತಡಕ್ಕೆ ಒಳಪಟ್ಟವರು, ಕೌಟುಂಬಿಕ ಸಮಸ್ಯೆಗೆ ಒಳಗಾದವರು, ಆತ್ಮಹತ್ಯೆಯಂತಹ ಆಲೋಚನೆಯನ್ನು ಹೊಂದಿರುವವರು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡ ಅನಿಭವಿಸುತ್ತಿರುವವರು ಹಾಗೂ ಇತರೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಟೆಲಿ ಮನಸ್ ಯೋಜನೆಯ ಶುಲ್ಕ ರಹಿತ ದೂರವಾಣಿ ಸಂಖ್ಯೆ: 14416 ಅನ್ನು ಸಂಪರ್ಕಿಸಿ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನಸಿಕ ಸಮಸ್ಯೆಗಳಿಗೆ ಟೆಲಿ ಮನಸ್‌ನಲ್ಲಿ ಪರಿಹಾರ
ಮಾನಸಿಕ ಸಮಸ್ಯೆಗಳಿಗೆ ಟೆಲಿ ಮನಸ್‌ನಲ್ಲಿ ಪರಿಹಾರ
Date: