ತಿರುವನಂತಪುರ, ಜೂನ್ 9: ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ತಲುಪಿದ್ದು, ಶುಕ್ರವಾರ ಸಂಜೆಯೊಳಗೆ ಕರ್ನಾಟಕ ಪ್ರವೇಶಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ಮುಂಗಾರಿನ ಪ್ರವೇಶ ಒಂದು ವಾರ ತಡವಾಗಿದೆ. ಮುಂಗಾರಿನ ಪ್ರವೇಶದ ಬೆನ್ನಲ್ಲೇ ಕೇರಳದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಅರೆಬಿಯನ್ ಸಮುದ್ರದಿಂದ ಸೈಕ್ಲೋನ್ ಉತ್ತರಕ್ಕೆ ಚಲಿಸಿದರಿಂದ ಮಾನ್ಸೂನ್ ಮಾರುತಗಳು ಕೇರಳ ಕಡೆಗೆ ಚಲಿಸಲು ಆರಂಭಿಸಿತು. ಅಂತಿಮವಾಗಿ ಇಂದು ಕೇರಳಕ್ಕೆ ಮಾನ್ಸೂನ್ ಆಗಮಿಸಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕಕ್ಕೂ ಮಾನ್ಸೂನ್ ಮಾರುಗಳು ಅಪ್ಪಳಿಸಲಿವೆ. ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಮಳೆಯಾಗುತ್ತಿದೆ.